ಇಸ್ರೇಲ್: ಇರಾನ್ ಮತ್ತು ಅಮೆರಿಕ ನಡುವೆ 14 ದಿನಗಳ ಕದನ ವಿರಾಮ ಘೋಷಣೆಯಾಗಿದ್ದು, ಈ ನಡುವೆ ಹಿಜ್ಬುಲ್ಲಾ ಮುಖ್ಯಸ್ಥ ನಯೀಮ್ ಖಾಸಿಮ್‌ನನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಮಾಹಿತಿ ನೀಡಿದೆ ಎಂದು ಮೂಲಗಳು ತಿಳಿಸಿದೆ.
ಇಸ್ರೇಲ್ ಲೆಬನಾನ್‌ನ ಹಿಜ್ಬೊಲ್ಲಾ ಮೇಲೆ ಭಾರೀ ದಾಳಿ ನಡೆಸುತ್ತಿದೆ. ಈ ದಾಳಿಯಲ್ಲಿ ಖಾಸಿಮ್ ಸಾವನ್ನಪ್ಪಿದ್ದಾನೆ ಎಂದು ಶಂಕಿಸಲಾಗಿದೆ. ಬೈರುತ್‌ನಲ್ಲಿ ನಡೆದ ಗುರಿ ದಾಳಿಯಲ್ಲಿ ಖಾಸಿಮ್ ಹತ್ಯೆಯಾಗಿದ್ದಾನೆ. ಈ ದಾಳಿಗಳಲ್ಲಿ 250 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

