ಜೆರುಸಲೇಂ: ಗೋಲಾನ್ ಹೈಟ್ಸ್ ಪ್ರದೇಶದ ಮೇಲೆ ಹಿಜ್ಬುಲ್ಲಾ ಭಯೋತ್ಪಾದಕ ಸಂಘಟನೆ ನಡೆಸಿದ ರಾಕೆಟ್ ದಾಳಿಯಲ್ಲಿ ಮಕ್ಕಳು ಸೇರಿದಂತೆ 12 ಮಂದಿ ಸಾವನ್ನಪ್ಪಿದ್ದು, ಇದಕ್ಕೆ ಪ್ರತಿಕಾರ ತೀರಿಸುವುದಾಗಿ ಇಸ್ರೇಲ್ ಶಪಥ ಕೈಗೊಂಡಿದೆ.
ಲೆಬನಾನ್‌ನಿಂದ ಹಾರಿಸಲಾದ ರಾಕೆಟ್ ಗೋಲನ್ ಹೈಟ್ಸ್‌ನ ಉತ್ತರದ ಡ್ರೂಜ್ ಪಟ್ಟಣವಾದ ಮಜ್ಡಾಲ್ ಶಾಮ್ಸ್‌ನಲ್ಲಿರುವ ಫುಟ್‌ಬಾಲ್ ಮೈದಾನಕ್ಕೆ ಅಪ್ಪಳಿಸಿ ಅಲ್ಲಿ ಆಟವಾಡುತ್ತಿದ್ದ ಮಕ್ಕಳು ಸೇರಿದಂತೆ ಹಲವರನ್ನು ಬಲಿ ಪಡೆದುಕೊಂಡಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇದಕ್ಕೆ ಹೆಜ್ಬುಲ್ಲಾ ಸಂಘಟನೆ ಭಾರಿ ಬೆಲೆ ತೆರೆಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

