News Karnataka Kannada
Saturday, May 04 2024
ವಿದೇಶ

ಕದನ ವಿರಾಮ: 4ನೇ ಹಂತದಲ್ಲಿ 11 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್‌

ಕದನ ವಿರಾಮ ಒಪ್ಪಂದದಂತೆ 4ನೇ ಹಂತದಲ್ಲಿ 11 ಮಂದಿ ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಬಂಡುಕೋರರು ಬಿಡುಗಡೆ ಮಾಡಿದ್ದಾರೆ. ಒತ್ತೆಯಾಳುಗಳನ್ನು ಗಾಜಾಪಟ್ಟಿಯಲ್ಲಿರುವ ರೆಡ್ಕ್ರಾಸ್ ಪ್ರತಿನಿಧಿಗಳಿಗೆ ಒಪ್ಪಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ದೃಢಪಡಿಸಿದೆ
Photo Credit : News Kannada

ಜೆರುಸಲೇಂ: ಕದನ ವಿರಾಮ ಒಪ್ಪಂದದಂತೆ 4ನೇ ಹಂತದಲ್ಲಿ 11 ಮಂದಿ ಇಸ್ರೇಲಿ ಒತ್ತೆಯಾಳುಗಳನ್ನು ಹಮಾಸ್ ಬಂಡುಕೋರರು ಬಿಡುಗಡೆ ಮಾಡಿದ್ದಾರೆ. ಒತ್ತೆಯಾಳುಗಳನ್ನು ಗಾಜಾಪಟ್ಟಿಯಲ್ಲಿರುವ ರೆಡ್ಕ್ರಾಸ್ ಪ್ರತಿನಿಧಿಗಳಿಗೆ ಒಪ್ಪಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ ದೃಢಪಡಿಸಿದೆ.

ಕದನ ವಿರಾಮ ಘೋಷಣೆಯ 4ನೇ ದಿನವಾದ ಸೋಮವಾರ ಈ ಪ್ರಕ್ರಿಯೆ ನಡೆದಿದೆ. ‘ಒಪ್ಪಂದದಂತೆ ನಿನ್ನೆ 11 ಮಂದಿ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಕೂಡ 33 ಮಂದಿ ಪ್ಯಾಲೆಸ್ಟೀನಿ ಕೈದಿಗಳನ್ನು ಬಿಡುಗಡೆ ಮಾಡಿದೆ’ ಎಂದು ಕತಾರ್ನ ವಿದೇಶಾಂಗ ಸಚಿವಾಲಯದ ವಕ್ತಾರ ಮಜೀದ್ ಅಲ್ ಅನ್ಸಾರಿ ಅವರು ಹೇಳಿದ್ದಾರೆ.

ಇನ್ನು 2 ದಿನ ಕದನ ವಿರಾಮ ವಿಸ್ತರಣೆ ಈ ನಡುವೆ ಇಸ್ರೇಲ್ ಕದನದಲ್ಲಿ ಮತ್ತೆರಡು ದಿನಗಳ ಯುದ್ಧ ವಿರಾಮವನ್ನು ಘೋಷಣೆ ಮಾಡಲಾಗಿದೆ. ಈ ಮೊದಲಿನ ಒಪ್ಪಂದಂತೆ 4 ದಿನಗಳ ಕದನ ವಿರಾಮ ಸೋಮವಾರಕ್ಕೆ ಅಂತ್ಯವಾಗಬೇಕಿತ್ತು. ಆದರೆ, ಮಾನವೀಯತೆಯ ದೃಷ್ಟಿಯಿಂದ 2 ದಿನ ವಿಸ್ತರಣೆ ಮಾಡಲಾಗಿದೆ. ಈ ವೇಳೆ ಮತ್ತಷ್ಟು ಒತ್ತೆಯಾಳುಗಳನ್ನು ಉಭಯ ಬಣಗಳು ವಿನಿಮಯ ಮಾಡಿಕೊಳ್ಳಲಿವೆ.

ಈಗಾಗಲೇ 3ನೇ ದಿನ ಹಮಾಸ್ 17 ಜನರನ್ನು, ಇಸ್ರೇಲ್ 39 ಜನರನ್ನು ಬಿಡುಗಡೆ ಮಾಡಿದೆ. 2ನೇ ದಿನ ಹಮಾಸ್ 20 ಇಸ್ರೇಲಿಗರು, ಇಸ್ರೇಲ್ 39 ಪ್ಯಾಲೆಸ್ತೀನಿ ಕೈದಿಗಳನ್ನು ಬಿಡುಗಡೆ ಮಾಡಿದ್ದವು. ಮೂರನೇ ದಿನ 39 ಕೈದಿಗಳನ್ನು ಹಾಗೂ ಹಮಾಸ್ 24 ಮಂದಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದವು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು