ಲಂಡನ್: ಜಿ-20 ಶೃಂಗಸಭೆಗೆ ಭಾರತ ನೀಡಿರುವ ‘ವಸುದೈವ ಕುಟುಂಬಕಂ’ ಎಂಬ ಪರಿಕಲ್ಪನೆ ಶ್ರೇಷ್ಠವಾದುದ್ದಾಗಿದೆ ಎಂದು ಭಾರತೀಯ ಸಂಜಾತ, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ.
ವಿಶ್ವವೇ ಒಂದು ಕುಟುಂಬ ಎಂದು ಹೇಳುವಾಗ ನಾನು ಅದರ ಉದಾಹರಣೆಯಾಗಿದ್ದೇನೆ. ಪ್ರಧಾನಿ ಮೋದಿ ವಿವರಿಸಿದಂತೆ ಭಾರತ ಮತ್ತು ಬ್ರಿಟನ್ ನಡುವೆ ನಾನು ಸಂಬಂಧ ಸೇತುವೆಯಾಗಿದ್ದೇನೆ.
ನನ್ನಂತೆಯೇ ಸುಮಾರು 20 ಲಕ್ಷ ಮಂದಿ ಭಾರತೀಯ ಸಂಜಾತರು ಬ್ರಿಟನ್ನಲ್ಲಿದ್ದಾರೆ. ಹಾಗಾಗಿ, ಬ್ರಿಟನ್ ಪ್ರಧಾನಿಯಾಗಿ ನಾನು ಇಲ್ಲಿಗೆ ಬಂದಿರುವುದು ಅತ್ಯಂತ ವಿಶೇಷವಾದುದ್ದಾಗಿದೆ. ನನ್ನ ಕುಟುಂಬ ಇಲ್ಲಿಯೇ ಇದೆ ಎಂದು ರಿಷಿ ಹೇಳಿದ್ದಾರೆ.
ನಾನೊಬ್ಬ ಹೆಮ್ಮೆಯ ಹಿಂದು. ನಾನು ಹಿಂದುವಾಗಿಯೇ ಬೆಳೆದಿದ್ದೇನೆ. ಹಿಂದುವಾಗಿಯೇ ಇದ್ದೇನೆ. ನಾನು ಇಲ್ಲಿರುವ ಮುಂದಿನ ಕೆಲ ದಿನಗಳಲ್ಲಿ ಮಂದಿರಕ್ಕೆ ಭೇಟಿ ನೀಡುತ್ತೇನೆ. ನನ್ನಂತಹ ಒತ್ತಡದ ಬದುಕಿನಲ್ಲಿರುವವರಿಗೆ ಇಂತಹ ನಂಬಿಕೆಗಳು ಬಹಳ ಮುಖ್ಯ. ಅವು ನಮಗೆ ಒತ್ತಡದಿಂದ ಮುಕ್ತಿ ಕೊಡುತ್ತವೆ ಎಂದು ಸುನಕ್ ಹೇಳಿದರು.
2 minutes silence for “I am ashamed to be a Hindu” gang#G20Bharat #RishiSunak pic.twitter.com/dt42xxPQHr
— Kreately.in (@KreatelyMedia) September 8, 2023