ಈಜಿಪ್ಟ್: ದಿನಗೂಲಿ ನೌಕರರನ್ನು ಹೊತ್ತು ಸಾಗುತ್ತಿದ್ದ ದೋಣಿ ಮುಳುಗಿ ಸುಮಾರು 10 ಮಂದಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಈಜಿಪ್ಟ್ ರಾಜಧಾನಿಯ ನೈಲ್ ನದಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಅಲ್ಲಿನ ಗಿಜಾದ ಮೊನ್ಶಾತ್ ಎಲ್-ಕನಾಟರ್ ಪಟ್ಟಣದಲ್ಲಿ ದೋಣಿ ಮಗುಚಿದೆ. ದೋಣಿಯಲ್ಲಿ ಸುಮಾರು 15 ಮಂದಿ ದಿನಗೂಲಿ ನೌಕರರಿದ್ದರು. ಅವರನ್ನು ಸ್ಥಳೀಯ ಕಟ್ಟಡ ನಿರ್ಮಾಣದ ಕೆಲಸಕ್ಕಾಗಿ ತೆರಳುತ್ತಿದ್ದರು. ಈ ವೇಳೆ ದೋಣಿ ದುರಂತ ಸಂಭವಿಸಿದೆ. ರಕ್ಷಣಾ ಪಡೆಗಳು ಮೃತದೇಹವನ್ನು ನೀರಿನಿಂದ ಹೊರತೆಗೆದಿವೆ.
ಈಜಿಪ್ಟ್ ದೋಣಿ ದುರಂತದಲ್ಲಿ ಸಾವನ್ನಪ್ಪಿದ ಪ್ರತಿ ಕುಟುಂಬಗಳಿಗೆ ಪರಿಹಾರವನ್ನು ನೀಡಿದೆ. ಮೃತರ ಮನೆಯವರಿಗೆ 5 ಲಕ್ಷದ 35 ಸಾವಿರದಷ್ಟು ಪರಿಹಾರ ನೀಡಿದೆ. ಇನ್ನು ಬದುಳಿದವರಿಗಾಗಿ 50 ಸಾವಿರದಷ್ಟು ಪರಿಹಾರ ನೀಡಿದೆ.