ದುಬೈ: ಕರ್ನಾಟಕ ಸಂಘ ದುಬೈ ಅರ್ಪಿಸುವ 69ನೇ ಕರ್ನಾಟಕ ರಾಜ್ಯೋತ್ಸವ ದುಬೈ 2024ರ ಕಡಲಾಚೆಯಲ್ಲೊಬ್ಬ ಕನ್ನಡದ ಸಾಧಕರ ಕಾರ್ಯಕ್ರಮವು ನವೆಂಬರ್ ೧೦ ರಂದು ದುಬೈನಲ್ಲಿ ನಡೆಯಲಿದೆ.
ಯು.ಎ.ಇ ಕನ್ನಡಿಗರ , ಸರ್ವ ಸಮಾಜಗಳ ಪ್ರೀತಿ ಪಾತ್ರ, ಅಗಣ್ಯ ಸಮಾಜ ಸೇವೆ ಸಲ್ಲಿಸಿರುವ. ಕೊಡುಗೈ ದಾನಿ ಮತ್ತು ಹೆಮ್ಮೆಯ ಕನ್ನಡಿಗ ಶ್ರೀ ಜೇಮ್ಸ್ ಮೆಂಡೊನ್ಸ ರವರು ಈ ಬಾರಿಯ ದುಬೈ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ -2024 ಸ್ವೀಕರಿಸಲಿದ್ದಾರೆ.
ಬನ್ನಿ ಸಾಧಕರನ್ನು ಗೌರವಿಸೋಣ, ಹೊರನಾಡಿನ ಕನ್ನಡಿಗರಿಗೆ ನೀಡುವ ಅತ್ಯುನ್ನತ ಗೌರವ ಮತ್ತು ಪುರಸ್ಕಾರಕ್ಕೆ ಸಾಕ್ಷಿಯಾಗೋಣ
ಉಚಿತ ಟಿಕೆಟ್ ಗಾಗಿ ಈ ಕೆಳಗಿನ ಲಿಂಕ್ ನಲ್ಲಿ ನೋಂದಾಯಿಸಿ

