ಕೆನಡಾ: ವಿಮಾನ ಹತ್ತುವ ಸ್ವಲ್ಪ ಸಮಯದ ಮೊದಲು ಏರ್ ಇಂಡಿಯಾ ಪೈಲಟ್ ವೇಲೆ ಮದ್ಯದ ವಾಸನೆ ಬಂದ ಕಾರಣ ಕೆನಡಾದ ವ್ಯಾಂಕೋವರ್ ವಿಮಾನ ನಿಲ್ದಾಣದಲ್ಲಿ ಪೈಲೆಟ್ ಅವರನ್ನು ಬಂಧಿಸಲಾಯಿತು.
ಕ್ರಿಸ್‌ಮಸ್‌ಗೆ ಸ್ವಲ್ಪ ಮೊದಲು ಡಿಸೆಂಬರ್ 23 ರಂದು ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ವ್ಯಾಂಕೋವರ್ ವಿಮಾನ ನಿಲ್ದಾಣದ ಡ್ಯೂಟಿ-ಫ್ರೀ ಅಂಗಡಿಯ ಸಿಬ್ಬಂದಿಯೊಬ್ಬರು ಪೈಲಟ್ ಮದ್ಯ ಸೇವಿಸುತ್ತಿರುವುದನ್ನು ನೋಡಿದ ನಂತರ ಕೆನಡಾದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು.
ಅಧಿಕಾರಿಗಳು ಮದ್ಯ ಸೇವಿಸಿದ್ದಾರಾ ಎಂದು ಪರೀಕ್ಷೆಯನ್ನು ನಡೆಸಿದರು. ಈ ವೇಳೆ ಅವರು ಮದ್ಯ ಸೇವನೆ ಮಾಡಿದ್ದಾರೆ ಎಂದು ತಿಳಿದು ಬಂದಿದ್ದು, ಅವರನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

