ಒಟ್ಟಾವಾ: ನಾನು ನಿನ್ನನ್ನು ಒಂದು ಕ್ಷಣವೂ ನಂಬಲ್ಲ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರನ್ನು ಮುಖಾಮುಖಿ ಭೇಟಿಯಾದ ಅಲ್ಲಿನ ಪ್ರಜೆಯೊಬ್ಬ ನಿಂದಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಘಟನೆ ಸಾಲ್ಟ್ ಸ್ಟೆಯಲ್ಲಿನ ಉಕ್ಕಿನ ಸಂಸ್ಥೆಯಲ್ಲಿ ನಡೆದಿದೆ.
ಉಕ್ಕಿನ ಕಾರ್ಖಾನೆಗೆ ಭೇಟಿ ನೀಡಿದ ಟ್ರುಡೋ ಅಲ್ಲಿನ ಕೆಲಸಗಾರರ ಬಳಿ ಸಂವಾದ ನಡೆಸುತ್ತಿದ್ದ ಸಂದರ್ಭ ಅಲ್ಲಿದ್ದ ಅಪರಿಚಿತ ಕೆಲಸಗಾರನೊಬ್ಬ, ಹೆಚ್ಚಿನ ತೆರಿಗೆಗಳು, ವೈದ್ಯಕೀಯ ಬಿಲ್ ಹಾಗೂ ಇತರ ವಿಚಾರಗಳ ಬಗ್ಗೆ ಟೀಕಿಸಲು ಪ್ರಾರಂಭಿಸಿದ್ದಾನೆ. ಈ ವೇಳೆ ತಮ್ಮ ನೀತಿಗಳನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ ಟ್ರುಡೋ, ನಾವು ಈಗಷ್ಟೇ ತಂದಿರುವ 25% ಸುಂಕಗಳು ನಿಮಗೆ ಸಹಾಯ ಮಾಡಲಿವೆ, ಅದು ನಿಮ್ಮ ಕೆಲಸವನ್ನು ಉಳಿಸಿಕೊಳ್ಳುತ್ತದೆ ಎಂದಿದ್ದಾರೆ.
#WATCH: PM Justin Trudeau gets confronted by an Algoma steel worker and refuses to shake Trudeau’s hand in Sault Ste. Marie, Ontario. pic.twitter.com/MKwfP3cScM
— 6ixBuzzTV (@6ixbuzztv) September 1, 2024

