ಚೆನ್ನೈ: ನಾನು ದೀಪಾವಳಿ ಹಬ್ಬದಲ್ಲಿ ನಂಬಿಕೆ ಇರುವವರಿಗೆ ಮಾತ್ರ ಶುಭಾಶಯ ಕೋರುತ್ತೇನೆ ಎಂದು ತಮಿಳುನಾಡು ಸಿಎಂ ಎಂ.ಕೆ. ಸ್ಟ್ಯಾಲಿನ್ ಪುತ್ರ ಮತ್ತು ಡಿಸಿಎಂ ಉದಯನಿಧಿ ಸ್ಟಾಲಿನ್ ಹೇಳಿದರು.
ಭಾನುವಾರ ದೀಪಾವಳಿ ಹಿನ್ನಲೆ ಡಿಎಂಕೆ ಪರವಾಗಿ ಚೆನ್ನೈನಲ್ಲಿ ಉಡುಗೊರೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ವೇಳೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಚಿವ ಶೇಖರ್ ಬಾಬು, ಚೆನ್ನೈ ಕಾರ್ಪೊರೇಷನ್ ಮೇಯರ್ ಪ್ರಿಯಾ ರಾಜನ್, ಸಂಸದರಾದ ದಯಾನಿಧಿ ಮಾರನ್ ಮತ್ತು ಡಾ. ವೀರಾಸ್ವಾಮಿ, ಹಾಗೂ ಹಲವಾರು ಶಾಸಕರು ಮತ್ತು ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದರು.
ಉದಯನಿಧಿ ಹೇಳಿಕೆಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಿಯ ಬಿಜೆಪಿ ನಾಯಕಿ ಮತ್ತು ಮಾಜಿ ರಾಜ್ಯಪಾಲೆ ತಮಿಳಿಸೈ ಸೌದರಾಜನ್ ಅವರು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಮತ್ತು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರಿಗೆ ದೀಪಾವಳಿ ಶುಭಾಶಯ ಕೋರಿದರು. “ಅವರು ಒಪ್ಪುತ್ತಾರೋ ಇಲ್ಲವೋ ಎಂಬುದು ನಮಗೆ ಬೇಡ ಇದು ಹಿಂದೂಗಳ ಹಬ್ಬ ಎಂದು ಹೇಳಿದರು.
ನೀವು ಇತರ ಧರ್ಮದ ಜನರನ್ನು ಸ್ವಾಗತಿಸುವಾಗ, ಅದು ನಂಬಿಕೆಯುಳ್ಳವರಿಗೆ ಎಂದು ನೀವು ಹೇಳುವುದಿಲ್ಲ. ಆದರೆ ಹಿಂದೂ ಧರ್ಮದ ವಿಷಯಕ್ಕೆ ಬಂದಾಗ, ಅದು ನಂಬಿಕೆಯುಳ್ಳವರಿಗೆ ಎಂದು ನೀವು ಹೇಳುತ್ತೀರಿ ಉದಯನಿಧಿ ಅವರ ಹೇಳಿಕೆಗಳನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಅವರು ಹೇಳಿದ್ದಾರೆ. ತಮಿಳುನಾಡು ಬಿಜೆಪಿ ವಕ್ತಾರ ಎಎನ್ಎಸ್ ಪ್ರಸಾದ್ ಮಾತನಾಡಿ, ಡಿಎಂಕೆ ಹಿಂದೂ ವಿರೋಧಿ ಪಕ್ಷ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಒಮ್ಮೆ ಅಧಿಕಾರಕ್ಕೆ ಬಂದ ನಂತರ, ಪ್ರತಿಯೊಬ್ಬ ನಾಗರಿಕನನ್ನೂ ಸಂಪೂರ್ಣ ಸಮಾನತೆಯಿಂದ ನಡೆಸಿಕೊಳ್ಳುವುದು ಅವರ ಕರ್ತವ್ಯ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸೂಕ್ಷ್ಮವಾಗಿ ರಚಿಸಿದ ಸಂವಿಧಾನವು ಈ ಕಡ್ಡಾಯವನ್ನು ಸ್ಪಷ್ಟತೆಯೊಂದಿಗೆ ಒತ್ತಿಹೇಳುತ್ತದೆ. ಆದರೂ, ಡಿಎಂಕೆ ಆಡಳಿತವು ಹಿಂದೂ ಹಬ್ಬಗಳಿಗೆ ಶುಭಾಶಯ ಕೋರುವುದಿಲ್ಲ ಎಂದು ಕಿಡಿ ಕಾರಿದರು.
2023 ರಲ್ಲಿ, ಉದಯನಿಧಿ ಸ್ಟ್ಯಾಲಿನ್ ಸನಾತನ ಧರ್ಮವು ಸಾಮಾಜಿಕ ನ್ಯಾಯದ ಕಲ್ಪನೆಗೆ ವಿರುದ್ಧವಾಗಿದೆ ಮತ್ತು ಅದನ್ನು “ನಿರ್ಮೂಲನೆ” ಮಾಡಬೇಕು ಎಂದು ಹೇಳಿ ವಿವಾದವನ್ನು ಹುಟ್ಟುಹಾಕಿದ್ದರು. ಅವರು ಸನಾತನ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾದಂತಹ ಕಾಯಿಲೆಗಳೊಂದಿಗೆ ಹೋಲಿಸಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

