News Karnataka Kannada
Thursday, May 02 2024
ಪಶ್ಚಿಮ ಬಂಗಾಳ

ಪಿಕ್​ ಪಾಕೆಟ್​ ಮಾಡಿದ ಆರೋಪದ ಮೇಲೆ ನಟಿ ರೂಪಾ ದತ್ತ ಬಂಧನ

Roopa
Photo Credit :

ಪಶ್ಚಿಮ ಬಂಗಾಳದ ನಟಿ ರೂಪಾ ದತ್ತ ಅವರನ್ನು ಪಿಕ್​ ಪಾಕೆಟ್​ ಮಾಡಿದ ಆರೋಪದ ಮೇಲೆ ಕೋಲ್ಕತ ಪೊಲೀಸರು ಬಂಧಿಸಿದ್ದಾರೆ. ಶನಿವಾರ ರಾತ್ರಿ (ಮಾರ್ಚ್​ 12) ನಡೆದ ಅಂತಾರಾಷ್ಟ್ರೀಯ ಕೋಲ್ಕತ ಪುಸ್ತಕ ಮೇಳದಲ್ಲಿ ರೂಪಾ ದತ್ತ ಪಿಕ್​ ಪಾಕೆಟ್ ಮಾಡಿದ್ದಾರೆ ಎಂದು ಹೇಳಲಾಗಿದೆ.

ಮಹಿಳೆಯೊಬ್ಬಳು ಕಸದ ಬುಟ್ಟಿಗೆ ಬ್ಯಾಗ್​ ಎಸೆಯುವುದನ್ನು ಪುಸ್ತಕ ಮೇಳಕ್ಕೆ ನಿಯೋಜನೆಗೊಂಡಿದ್ದ ಪೊಲೀಸ್​ ಸಿಬ್ಬಂದಿ ನೋಡಿದ್ದು, ತಕ್ಷಣ ಅನುಮಾನಗೊಂಡು ಮಹಿಳೆಯನ್ನು ವಿಚಾರಿಸಿದಾಗ ಆಕೆ ನಟಿ ರೂಪಾ ದತ್ತ ಎಂಬುದು ಬೆಳಕಿಗೆ ಬಂದಿದೆ.

ಆಕೆಯ ಬ್ಯಾಗ್​ನಲ್ಲಿ ಅನೇಕ ಪಾಕೆಟ್​ ಇರುವುದು ಕಂಡುಬಂದಿತ್ತು. ಒಟ್ಟು 75 ಸಾವಿರ ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ರೂಪಾ ದತ್ತ ಅವರನ್ನು ಪಿಕ್​ ಪಾಕೆಟ್​ ಆರೋಪದಲ್ಲಿ ಬಂಧಿಸಲಾಗಿದ್ದು, ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಕೆಲ ವರ್ಷಗಳ ಹಿಂದೆ ನಿರ್ದೇಶಕ ಅನುರಾಗ್​ ಕಶ್ಯಪ್​ ವಿರುದ್ಧ ಸುಳ್ಳು ಆರೋಪ ಮಾಡಿ ರೂಪಾ ದತ್ತ ಸುದ್ದಿಯಾಗಿದ್ದರು. ಕಶ್ಯಪ್​ ಅವರು ಫೇಸ್​ಬುಕ್​ ಮೂಲಕ ನನಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಮತ್ತು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಆದರೆ, ರೂಪಾ, ಅನುರಾಗ್ ಹೆಸರಿನ ಇನ್ನೊಬ್ಬ ವ್ಯಕ್ತಿಯೊಂದಿಗೆ ಚಾಟ್​ ಮಾಡುತ್ತಿದ್ದಳು ಎಂಬುದು ತಂದನಂತರದಲ್ಲಿ ವಿಚಾರಣೆಯ ಬಳಿಕ ಗೊತ್ತಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು