ಕಲ್ಕತ್ತಾ : ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿ ಅರಿಜಿತ್ ಬ್ಯಾನರ್ಜಿ ಅವರನ್ನೊಳಗೊಂಡ ಕಲ್ಕತ್ತಾ ಹೈಕೋರ್ಟ್ನ ವಿಭಾಗೀಯ ಪೀಠವು ಸೋಮವಾರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ 10,000 ಮತ್ತು ಪಶ್ಚಿಮ ಬಂಗಾಳ ಸರ್ಕಾರ ಮತ್ತು ಸರ್ಕಾರಿ ಸ್ವಾಮ್ಯದ ನಿಗಮ ಪಶ್ಚಿಮ ಬಂಗಾಳ ವಸತಿ ಮೂಲಸೌಕರ್ಯ ಅಭಿವೃದ್ಧಿ ನಿಗಮ (WBHIDCO) ವಿರುದ್ಧ ತಲಾ ರೂ. 50,000 ದಂಡ ವಿಧಿಸಿದೆ.
ಕೋಲ್ಕತ್ತಾದ ಸಮೀಪದ ನ್ಯೂ ಟೌನ್ ಪ್ರದೇಶದಲ್ಲಿ ಶಾಲೆಯನ್ನು ಸ್ಥಾಪಿಸಲು ಅನಿಯಮಿತ ನಿವೇಶನ ಹಂಚಿಕೆ ಆರೋಪದಲ್ಲಿ ನ್ಯಾಯಾಲಯ ಈ ದಂಡ ವಿಧಿಸಿದೆ.