ಉತ್ತರಾಖಂಡ: ಉತ್ತರಾಖಂಡದಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಗಂಗಾ ನದಿಯಲ್ಲಿ ಪೋಷಕರು ಮಗನನ್ನು ಮುಳುಗಿಸಿದ ಪರಿಣಾಮ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.
ಪೋಷಕರು, ಬ್ಲಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದ ತಮ್ಮ ಏಳು ವರ್ಷದ ಮಗನನ್ನು ಗಂಗಾ ನದಿಯಲ್ಲಿ ಸ್ನಾನ ಮಾಡಿಸಿದರೆ ರೋಗದಿಂದ ಚೇತರಿಕೆ ಕಾಣಬಹುದು ಎಂಬ ಹಂಬಲದಲ್ಲಿದ್ದ ನೀರಿನಲ್ಲಿ ನಿಲ್ಲಿಸಿ ಮಗನನ್ನು ಮುಳುಗಿಸಿದ್ದಾರೆ ಆಗ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಹುಡುಗನ ಪೋಷಕರು ಹರ್ ಕಿ ಪೌರಿ ದಡದಲ್ಲಿ ಮಂತ್ರಗಳನ್ನು ಪಠಿಸುತ್ತ ಇದ್ದರು, ಆದರೆ ಅವನ ಚಿಕ್ಕಮ್ಮ ಅವನ ಜೋರಾದ ಕೂಗನ್ನು ನಿರ್ಲಕ್ಷಿಸಿ ಗಂಗಾದಲ್ಲಿ ಪದೇ ಪದೇ ಅದ್ದಿದ್ದಾರೆ ಕೊನೆಗೆ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಮಗುವಿನ ಪೋಷಕರು ಮತ್ತು ಚಿಕ್ಕಮ್ಮನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಎಸ್ಎಚ್ಒ ತಿಳಿಸಿದ್ದಾರೆ.