ಲಕ್ನೋ: ಒಂದೂವರೆ ವರ್ಷದ ಮಗುವಿನ ಮೇಲೆ 22 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಖುಷಿನಗರ ಜಿಲ್ಲೆಯಲ್ಲಿ ನಡೆದಿದ್ದು, ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಮಗುವಿಗೆ ಚಾಕೋಲೇಟ್ ಕೊಡಿಸುತ್ತೇನೆ ಎಂದು ಆಕೆಯನ್ನು ಎತ್ತಿಕೊಂಡು ಹೋಗಿದ್ದ ಯುವಕ 2 ಗಂಟೆ ಕಳೆದರೂ ಮಗುವನ್ನು ಕರೆದುಕೊಂಡು ವಾಪಸ್ ಬಾರದೆ ಇದ್ದಾಗ ಮಗುವಿನ ಕುಟುಂಬಸ್ಥರು ಆತನ ಮನೆಗೆ ತೆರಳಿ ಮಗಳ ಬಗ್ಗೆ ವಿಚಾರಿಸಿದ್ದಾರೆ. ಅಲ್ಲಿ ಮಗು ಕಾಣಿಸದಿದ್ದಾಗ ಗಾಬರಿಯಾಗಿದ್ದಾರೆ.
ನಂತರ ಮಗುವಿನ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೋಲೀಸರ ವಿಚಾರಣೆಯ ವೇಳೆ ಆರೋಪಿ ಯುವಕ ತನ್ನ ಜಮೀನಿನಲ್ಲಿದ್ದ ಆ ಒಂದೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ.
ಪೊಲೀಸರು ಯುವಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.