News Karnataka Kannada
Wednesday, May 01 2024
ಕ್ರೈಮ್

ವಿಡಿಯೋ: ಮಗುವನ್ನು ಹೆಗಲ ಮೇಲೆ ಹೊತ್ತೊಯ್ಯುವಾಗ ತಂದೆಗೆ ಗುಂಡು ಹಾರಿಸಿದ ದುಷ್ಕರ್ಮಿ

UP Crime
Photo Credit : News Kannada

ಉತ್ತರ ಪ್ರದೇಶ: ಶಹಜಹಾನ್‌ಪುರದಲ್ಲಿ ಸೋಮವಾರ ತನ್ನ ಮಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿದ್ದ ತಂದೆಗೆ ದುಷ್ಕರ್ಮಿಯೊಬ್ಬ ಗುಂಡಿಕ್ಕಿರುವ ಘಟನೆ ನಡೆದಿದೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವ್ಯಕ್ತಿಯೊಬ್ಬ ತನ್ನ ಮಗಳನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು ಹೋಗುತ್ತಿರುವಾಗ ಇದ್ದಕ್ಕಿದ್ದಂತೆ ಶಸ್ತ್ರಸಜ್ಜಿತ ದುಷ್ಕರ್ಮಿಯೊಬ್ಬ ಸಮೀಪಿಸಿ ಅವನ ತಲೆಗೆ ಗುಂಡು ಹಾರಿಸುತ್ತಿರುವುದು ಕಾಣಬಹುದು. ದಾಳಿ ಬಳಿಕ ಬೈಕ್‌ನಲ್ಲಿ ಕಾಯುತ್ತಿದ್ದ ಇಬ್ಬರು ದುಷ್ಕರ್ಮಿಗಳ ಬೈಕ್ ಏರಿ ಗುಂಡು ಹಾರಿಸಿದ್ದಾತ ಸ್ಥಳದಿಂದ ಪರಾರಿಯಾಗಿದ್ದಾನೆ.

ಚೌಕ್ ಪಿಎಸ್ ವ್ಯಾಪ್ತಿಯ ಬಾಬುಜೈ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ. ಗುಂಡೇಟಿನ ಸದ್ದು ಸಂತ್ರಸ್ತನ ಕುಟುಂಬ ಸದಸ್ಯರಿಗೆ ಕೇಳಿಸಿದ್ದು, ಮನೆಯಿಂದ ಹೊರಬಂದು ನೋಡಿ ಆಘಾತಕ್ಕೊಳಗಾಗಿದ್ದಾರೆ.

ಸದ್ಯ ಗಾಯಗೊಂಡಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಾಗಿದ್ದು, ಸ್ಥಿತಿ ಗಂಭೀರವಾಗಿದೆ. ಇತ್ತ ಇಬ್ಬರು ಆರೋಪಿಗಳಲ್ಲಿ ಬಂಧಿಸಲಾಗಿದ್ದು ಮತ್ತೋಬ್ಬನಿಗಾಗಿ ಖಾಕಿ ಪಡೆ ಬಲೆ ಬೀಸಿರುವುದಾಗಿ ವರದಿಯಾಗಿದೆ.

https://twitter.com/Delhiite_/status/1691053266430492672

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು