News Karnataka Kannada
Friday, May 10 2024
ಉತ್ತರ ಪ್ರದೇಶ

ಲಕ್ನೋ: ಇವಿ ವಾಹನಗಳಿಗೆ ಉತ್ತರ ಪ್ರದೇಶ ಸರ್ಕಾರ ಒತ್ತು

Yogi to campaign for BJP in Bantwal
Photo Credit : IANS

ಲಕ್ನೋ: 2030 ರ ವೇಳೆಗೆ ಎಲ್ಲಾ ರಾಜ್ಯ ಸರ್ಕಾರಿ ವಾಹನಗಳನ್ನು ಕ್ರಮೇಣ ಇವಿ (ವಿದ್ಯುತ್‌ ಶಕ್ತಿ ಚಾಲಿತ) ವಾಹನಗಳನ್ನಾಗಿ ಬದಲಾಯಿಸಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಈ ಗುರಿಯನ್ನು ಮುಟ್ಟಲು, ನಾಮ ನಿರ್ದೇಶನದ ಆಧಾರದ ಮೇಲೆ ಟೆಂಡರ್ ಮಾಡದೆಯೇ ಇವಿಗಳನ್ನು ಖರೀದಿಸಬಹುದು. ಅಗತ್ಯವಿದ್ದರೆ, ಇವಿಗಳ ಖರೀದಿಗೆ ನಿಗದಿಪಡಿಸಿದ ಗರಿಷ್ಠ ಮಿತಿಗಿಂತ ಹೆಚ್ಚಿನದನ್ನು ಖರ್ಚು ಮಾಡಬಹುದು ಎಂದು ಇಲಾಖೆಗಳಿಗೆ ತಿಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇವಿಗಳು ಪ್ರಸ್ತುತ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳಿಗಿಂತ ಹೆಚ್ಚು ದುಬಾರಿಯಾಗಿರುವುದರಿಂದ ಈ ಎರಡು ನಿಬಂಧನೆ ಮಾಡಲಾಗಿದೆ. ಇದರಿಂದ ವಾಹನ ಖರೀದಿಗೆ ಹೆಚ್ಚುವರಿ ಹಣಕಾಸು ಒದಗಿಸಲು ಅವಕಾಶ ದೊರೆಯುತ್ತದೆ ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು