News Karnataka Kannada
Wednesday, May 01 2024
ಉತ್ತರ ಪ್ರದೇಶ

ಬೆಕ್ಕು ಕಚ್ಚಿ ಒಟ್ಟೊಟ್ಟಿಗೆ ಜೀವ ಬಿಟ್ಟ ಅಪ್ಪ-ಮಗ

ಉತ್ತರ ಪ್ರದೇಶದ ಕಾನ್ಪುರದಲ್ಲಿ ತಂದೆ ಮತ್ತು ಮಗ ಡೆಡ್ಲಿ ರೆಬೀಸ್​ಗೆ ಸಾವನ್ನಪ್ಪಿದ್ದಾರೆ. ಮೃತರ ಮನೆಯ ಬೆಕ್ಕಿಗೆ ಹುಚ್ಚು ನಾಯಿಯೊಂದು ಕಚ್ಚಿತ್ತು. ಬಳಿಕ ಈ ಬೆಕ್ಕು ತನ್ನ ಮಾಲೀಕರಿಬ್ಬರಿಗೆ ಕಚ್ಚಿತ್ತು. ಕಚ್ಚಿದ ಒಂದು ವಾರದಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ.
Photo Credit : News Kannada

ಉತ್ತರ ಪ್ರದೇಶ: ಉತ್ತರ ಪ್ರದೇಶದ ಕಾನ್ಪುರದಲ್ಲಿ ತಂದೆ ಮತ್ತು ಮಗ ಡೆಡ್ಲಿ ರೆಬೀಸ್​ಗೆ ಸಾವನ್ನಪ್ಪಿದ್ದಾರೆ. ಮೃತರ ಮನೆಯ ಬೆಕ್ಕಿಗೆ ಹುಚ್ಚು ನಾಯಿಯೊಂದು ಕಚ್ಚಿತ್ತು. ಬಳಿಕ ಈ ಬೆಕ್ಕು ತನ್ನ ಮಾಲೀಕರಿಬ್ಬರಿಗೆ ಕಚ್ಚಿತ್ತು. ಕಚ್ಚಿದ ಒಂದು ವಾರದಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ.

ಇವರು ಮನೆಯಲ್ಲಿ ಬೆಕ್ಕನ್ನು ಸಾಕಿದ್ದರು. ಕುಟುಂಬದ ಎಲ್ಲಾ ಸದಸ್ಯರೂ ಕೂಡ ಬೆಕ್ಕನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಒಂದು ದಿನ ಆ ಬೆಕ್ಕಿ ಬೀದಿ ನಾಯಿಯೊಂದು ಕಚ್ಚಿತ್ತು. ಕಚ್ಚಿದ್ದ ಕೆಲವೇ ದಿನಗಳಲ್ಲಿ ಆ ಬೆಕ್ಕಿನ ದೇಹದಲ್ಲಿ ರೇಬಿಸ್ ಲಕ್ಷಗಳು ಕಾಣಿಸಿಕೊಂಡಿದ್ದವು.

ಎಂದಿನಂತೆ ಬೆಕ್ಕಿನ ಜೊತೆ ಮನೆಯ ಸದಸ್ಯರು ಆಟವಾಡುತ್ತಿರುವಾಗ ಒಂದು ದಿನ ಅದು ತನ್ನ ಮಾಲೀಕನ ಮಗನಿಗೆ ಗಾಯಮಾಡಿತ್ತು. ಕೆಲ ದಿನಗಳ ಬೆನ್ನಲ್ಲೇ ಆತನ ಆರೋಗ್ಯ ಹದಗೆಡಲು ಶುರುವಾಯಿತು. ಕೊನೆ ಕೊನೆಗೆ ಆತ ಬೆಕ್ಕಿನ ಹಾಗೆಯೇ ವರ್ತಿಸಲು ಶುರುಮಾಡಿದ್ದ. ಕೊನೆಗೆ ಆತ ಮೃತಪಟ್ಟಿದ್ದ. ಮಗ ಮೃತಪಟ್ಟು ದಿನ ಕಳೆಯುವಷ್ಟರಲ್ಲಿ ತಂದೆಗೂ ಕೂಡ ಅದೇ ಪರಿಸ್ಥಿತಿ ಎದುರಾಯ್ತು. ಅವರೂ ಕೂಡ ರೇಬಿಸ್​​ನಿಂದ ಸಾವನ್ನಪ್ಪಿದರು. ಈ ವಿಚಾರ ಸ್ಥಳೀಯರಿಗೆ ಗೊತ್ತಾಗುತ್ತಿದ್ದಂತೆ ಬೆಚ್ಚಿಬಿದ್ದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು