ಲಕ್ನೋ: ನೀಟ್ ಯುಜಿ 2023ರ ಕೌನ್ಸೆಲಿಂಗ್ ವೇಳೆ ನಕಲಿ ಅಂಕಪಟ್ಟಿ, ಹಂಚಿಕೆ ಪತ್ರ ಮತ್ತು ಇತರ ದಾಖಲೆಗಳೊಂದಿಗೆ ಎಂಬಿಬಿಎಸ್ ಗೆ ಪ್ರವೇಶ ಕೋರಿದ್ದ ಅಭ್ಯರ್ಥಿಯನ್ನು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (ಕೆಜಿಎಂಯು) ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.
ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸ್ ಗಳ ಪ್ರವೇಶಕ್ಕಾಗಿ ಕೌನ್ಸೆಲಿಂಗ್ ನಡೆಯುತ್ತಿದ್ದು, ಈ ವೇಳೆ ಅಂಕಪಟ್ಟಿ ಹಾಜರುಪಡಿಸಿದ್ದು, ಜೊತೆಗೆ ವೈದ್ಯಕೀಯ ಕಾಲೇಜಿಗೆ ಹಂಚಿಕೆ ಪತ್ರವನ್ನು ಸಹ ಹಾಜರುಪಡಿಸಿದ್ದರು. ಆದರೆ ಅಂಕಪಟ್ಟಿ ಮತ್ತು ಹಂಚಿಕೆ ಪತ್ರ ನಕಲಿ ಎಂಬುದು ದೃಢಪಟ್ಟಿತ್ತು. ಅಲ್ಲದೆ ಅಭ್ಯರ್ಥಿಗೆ ಯಾವುದೇ ಕಾಲೇಜಿನಲ್ಲಿ ಸೀಟು ನೀಡಲಾಗಿಲ್ಲ ಎಂಬುದನ್ನು ಕಂಡುಕೊಂಡಿದ್ದರು. ನಕಲಿ ದಾಖಲೆಗಳ ಬಗ್ಗೆ ತಂಡವು ಅಭ್ಯರ್ಥಿಯನ್ನು ಪ್ರಶ್ನಿಸಿತು, ಆದರೆ ಅವರು ತೃಪ್ತಿಕರ ಉತ್ತರವನ್ನು ನೀಡಲು ಸಾಧ್ಯವಾಗಲಿಲ್ಲ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಲಾಯಿತು.