ಉತ್ತರ ಪ್ರದೇಶ: ನಿನ್ನೆಯಷ್ಟೇ ಸಿಎಂ ಯೋಗಿ ಸರಕಾರ ಧ್ವನಿ ವರ್ಧಕಗಳ ಮೇಲೆ ಕಠಿಣ ಆದೇಶ ಜಾರಿ ತಂದಿದ್ದು, ಇದೀಗ 6,031 ಧಾರ್ಮಿಕ ಕೇಂದ್ರಗಳಲ್ಲಿ ಪೊಲೀಸರು ಧ್ವನಿ ವರ್ಧಕಗಳನ್ನು ತೆರವುಗೊಳಿಸಿದ್ದು, 30,000 ಧ್ವನಿವರ್ಧಕಗಳಲ್ಲಿನ ಶಬ್ದವನ್ನು ಕಡಿಮೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಯೋಗಿ ರಾಜ್ಯದಲ್ಲಿ ಧ್ವನಿವರ್ಧಕಗಳ ತೆರವು ಹಾಗೂ ಶಬ್ದ ಕಡಿಮೆ ಮಾಡುವ ಅಭಿಯಾನ ನಡೆಯುತ್ತಿದ್ದು ಕೆಲವು ಧ್ವನಿವರ್ಧಕಗಳಲ್ಲಿ ಅನುಮತಿ ನೀಡಲಾದ ಪ್ರಮಾಣಕ್ಕೆ ಶಬ್ದವನ್ನು ನಿಗದಿಪಡಿಸಲಾಗುತ್ತಿದೆ ಎಂದು ಡಿಜಿಪಿ (ಕಾನೂನು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ಬುಧವಾರ ಮಧ್ಯಾಹ್ನದ ವರೆಗೆ 6,031 ಧ್ವನಿವರ್ಧಕಗಳನ್ನು ತೆರವುಗೊಳಿಸಲಾಗಿದೆ. 29,674 ಧ್ವನಿವರ್ಧಕಗಳನ್ನು ಅನುಮತಿ ನೀಡಲಾಗಿರುವ ಶಬ್ದಕ್ಕೆ ಬದಲಾವಣೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.