ಮಗು ಅಪಹರಣ ಆರೋಪ: ವ್ಯಕ್ತಿಯನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿ ಕೊಲೆ

ಗ್ರೇಟರ್ ನೋಯ್ಡಾ : ಮಗುವನ್ನು ಅಪಹರಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಮರಕ್ಕೆ ಕಟ್ಟಿ, ನಿರ್ಧಯವಾಗಿ ಥಳಿಸಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿ ಓರ್ವನನ್ನು ಬಂಧಿಸಲಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿರುವ ಇತರರನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.

ಆರೋಪಿ ಗುರುವಾರ ರಾತ್ರಿ 11 ಗಂಟೆಗೆ ಗ್ರೇಟರ್ ನೋಯ್ಡಾದ ಕನರ್ಸಿ ಗ್ರಾಮದ ನರೇಶ್ ಎಂಬವರ ಮನೆಗೆ ನುಗ್ಗಿ 5 ತಿಂಗಳ ಮಗುವನ್ನು ಅಪಹರಿಸಿಕೊಂಡು ಹೋಗುತ್ತಿದ್ದಾಗ ಮಗು ಅಳಲಾರಂಭಿಸಿದೆ. ಮಗು ಅಳುತ್ತಿರುವುದನ್ನು ಕೇಳಿ ಮನೆಯ ಸದಸ್ಯರು ಎಚ್ಚರಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಲ್ಪ ಸಮಯದ ನಂತರ ಆರೋಪಿಯನ್ನು ಗ್ರಾಮಸ್ಥರು ಹಿಡಿದಿದ್ದಾರೆ. ನಂತರ ಪೊಲೀಸರಿಗೆ ಒಪ್ಪಿಸುವ ಮೊದಲು ಮರಕ್ಕೆ ಕಟ್ಟಿ ಹಾಕಿ ದೊಣ್ಣೆಗಳಿಂದ ಥಳಿಸಿದ್ದಾರೆ. ಬಳಿಕ ಶುಕ್ರವಾರ ಬೆಳಗ್ಗೆ ಆರೋಪಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯನ್ನು ನೇಪಾಳದ ದೊಂಡ್ರಾ ಗ್ರಾಮದ ನಿವಾಸಿ ನಂಕು ಎಂದು ಗುರುತಿಸಲಾಗಿದೆ. ಪೊಲೀಸರು ಆತನನ್ನು ಕೊತ್ವಾಲಿಗೆ ಕರೆದೊಯ್ದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಅಲ್ಲಿಂದ ಜಿಲ್ಲಾಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ನಂಕು ಮೃತಪಟ್ಟಿದ್ದಾಗಿ ಎಂದು ಹೆಚ್ಚುವರಿ ಡಿಸಿಪಿ ವಿಶಾಲ್ ಪಾಂಡೆ ತಿಳಿಸಿದ್ದಾರೆ.

Gayathri SG

Recent Posts

ಅವರೆಕಾಳು ಕಚೋರಿ ಮನೆಯಲ್ಲೇ ಮಾಡುವುದು ಹೇಗೆ?

ಬಿಸಿ, ಬಿಸಿ ಅವರೆ ಕಚೋರಿಯನ್ನು ಮನೆಯಲ್ಲಿಯೇ ಮಾಡಿ ಸವಿಯುವುದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ತಯಾರಿಯ ಬಗೆಗಿನ ಮಾಹಿತಿ.

26 mins ago

ಬೃಹತ್ ನಕಲಿ ಸಿಮ್ ಜಾಲ ದಂಧೆ ಬೆಳಕಿಗೆ: ಆನ್ಲೈನ್ ವಂಚಕರಿಗೆ ಮಡಿಕೇರಿಯಿಂದ ಸಿಮ್ ಸಪ್ಲೈ

ಆನ್ ಲೈನ್ ಮೂಲಕ ವಿವಿಧ ರೀತಿಯಲ್ಲಿ ವಂಚಿಸಿ ಲಕ್ಷ ಲಕ್ಷ ಹಣವನ್ನು ದೋಚುತ್ತಿದ್ದ ನಯ ವಂಚಕ ದಂಧೆಕೋರರಿಗೆ ಗ್ರಾಹಕರ ಬದಲಿ…

35 mins ago

ಮಹಿಳೆಯ ಎಳೆದೊಯ್ದು ಕಾರು ಪಾರ್ಕಿಂಗ್‌ನಲ್ಲಿ ಅತ್ಯಾಚಾರ; ಭೀಕರ ದೃಶ್ಯ ಸೆರೆ

ಮಹಿಳೆ ಮೇಲೆ ಹಿಂಬದಿಯಿಂದ ಬೆಲ್ಟ್ ಮೂಲಕ ದಾಳಿ ನಡೆಸಿ, ಆಕೆಯನ್ನು ಎಳೆದೊಯ್ದು ಅತ್ಯಾಚಾರ ಎಸಗಿದ ಭೀಕರ ಘಟನೆ ನ್ಯೂಯಾರ್ಕ್ ನಗರದಲ್ಲಿ…

38 mins ago

ಮಲತಂದೆಯಿಂದಲೇ ಬಾಲಿವುಡ್ ನಟಿ ಕೊಲೆ; ಕೋರ್ಟ್

ಬಾಲಿವುಡ್ ನಟಿ ಲೈಲಾ ಖಾನ್ ಹತ್ಯೆ ಪ್ರಕರಣದಲ್ಲಿ ಮಲತಂದೆ ಪರ್ವೀನ್ ತಾಕ್ ದೋಷಿ ಎಂದು ಮುಂಬೈ ಸೆಷನ್ ಕೋರ್ಟ್ ಘಟನೆ…

50 mins ago

ಅಮೆರಿಕಕ್ಕೆ ಕೊಂಡೊಯ್ಯುವ ಶ್ವಾನಗಳಿಗೆ ಮೈಕ್ರೊಚಿಪ್‌ ಅಳವಡಿಕೆ ಕಡ್ಡಾಯ

ಅನ್ಯ ದೇಶಗಳಿಂದ ಅಮೆರಿಕಕ್ಕೆ ಕೊಂಡೊಯ್ಯುವ ಶ್ವಾನಗಳಿಗೆ ಕನಿಷ್ಠ 6 ತಿಂಗಳಾಗಿರಬೇಕು ಮತ್ತು ರೇಬಿಸ್‌ ತಡೆಗಟ್ಟುವ ಲಸಿಕೆ ಹಾಕಿಸಿರುವ ಮಾಹಿತಿ ಇರುವ…

52 mins ago

ಶಾರ್ಟ್ ಸರ್ಕ್ಯೂಟ್​ನಿಂದ ಸಿನಿಮಾ ಶೂಟಿಂಗ್ ಸೆಟ್​ ನಲ್ಲಿ ಬೆಂಕಿ: ನಾಲ್ಕು ಕೋಟಿ ನಷ್ಟ

ಲುಗು  ಜನಪ್ರಿಯ ನಟ ನಂದಮೂರಿ ಕಲ್ಯಾಣ್ ರಾಮ್  ನಟಿಸುತ್ತಿರುವ ಹೊಸ ಸಿನಿಮಾದ ಚಿತ್ರೀಕರಣ ನಡೆಸಲಾಗುತ್ತಿದ್ದ ಸೆಟ್​ಗೆ ಶಾರ್ಟ್ ಸರ್ಕ್ಯೂಟ್​ನಿಂದಾಗಿ ಬೆಂಕಿ…

53 mins ago