ಬಂದೂಕಿನ ಜತೆ ಸೆಲ್ಫೀ ತೆಗೆದುಕೊಳ್ಳುವಾಗ ಟ್ರಿಗರ್‌ ಎಳೆದು ಸಾವು

ಲಕ್ನೋ: ದೇಶದಲ್ಲಿ ನಿತ್ಯವೂ ಸೆಲ್ಫಿ ಹುಚ್ಚಿನಿಂದಾಗಿ ಜನರು ಪ್ರಾಣ ಕಳೆದುಕೊಳ್ಳುತಿದ್ದಾರೆ. ಎಷ್ಟೇ ಎಚ್ಚರಿಕೆ ನೀಡಿದರೂ ಜನರು ಮಾತ್ರ ಅಜಾಗರೂಕತೆ ಮೆರೆದು ಪ್ರಾಣ ಬಿಡುತಿದ್ದಾರೆ. ಉತ್ತರ ಪ್ರದೇಶದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಮಹಿಳೆ ಅಚಾನಕ್ಕಾಗಿ ತನಗೆ ತಾನೇ ಗುಂಡು ಹಾರಿಸಿಕೊಂಡಿದ್ದು, ಸಾವನ್ನಪ್ಪಿದ್ದಾಳೆ.
ಮೃತಳನ್ನು 26 ವರ್ಷದ ನವ ವಿವಾಹಿತೆ ರಾಧಿಕಾ ಗುಪ್ತಾ ಎಂದು ಗುರುತಿಸಲಾಗಿದೆ. ಈಕೆಯು ತನ್ನ ಮಾವನ ಸಿಂಗಲ್ ಬ್ಯಾರಲ್ ಕೋವಿ ಹಿಡಿದು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಅಚಾನಕ್ಕಾಗಿ ಗುಂಡು ಹಾರಿದೆ. ಕೋವಿಯಲ್ಲಿ ಬುಲೆಟ್‌ ಹಾಕಿಡಲಾಗಿತ್ತು. ಜತೆಗೇ ಕುದುರೆಯನ್ನೂ ಹಿಂದಕ್ಕೆ ಎಳೆದಿದ್ದಾಳೆ. ನಂತರ ಟ್ರಿಗರ್ ಮೇಲೆ ತನ್ನ ಬೆರಳು ಇಟ್ಟು ಸೆಲ್ಫಿಗೆ ಪೋಸ್ ನೀಡಿದ್ದಾಳೆ. ಆದರೆ ಅಚಾನಕ್ಕಾಗಿ ಟ್ರಿಗರ್ ಒತ್ತಿದ್ದು, ಪರಿಣಾಮ ಗುಂಡು ಹಾರಿದೆ.
ಗುಂಡು ರಾಧಿಕಾ ಗುಪ್ತಾಳ ಗಂಟಲು ಹೊಕ್ಕಿದ್ದು, ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಮಾರ್ಗಮಧ್ಯೆದಲ್ಲೇ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಫೋಟೋದಲ್ಲಿ ಬಂದೂಕಿನ ಕುದುರೆ ಹಿಂದಕ್ಕೆ ಎಳೆದಿರುವುದು ಸ್ಪಷ್ಟವಾಗಿ ಕಾಣಿಸಲಿ ಎಂಬ ಕಾರಣಕ್ಕೆ ಈಕೆ ಕುದುರೆ ಹಿಂದಕ್ಕೆ ಎಳೆದು ನೈಜವಾಗಿ ಫೋಟೋ ಬರಲಿ ಎಂದು ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದ್ದಳು ಎನ್ನಲಾಗಿದೆ. ರಾಧಿಕಾ ಮೇ 2021ರಲ್ಲಿ ಆಕಾಶ್ ಗುಪ್ತಾ ಜೊತೆ ವಿವಾಹವಾಗಿದ್ದಳು . ಘಟನೆಯಿಂದ ಆತಂಕಗೊಂಡಿರುವ ಮಹಿಳೆಯ ತಂದೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಾವು ನಗರದಲ್ಲಿ ಸಣ್ಣ ಜ್ಯೂವೆಲರಿ ಅಂಗಡಿ ನಡೆಸುತ್ತಿದ್ದೇವೆ. ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನನ್ನ ಮಗ ಆಕಾಶ್ 12 ಬೋರ್ ನ ಸಿಂಗಲ್ ಬ್ಯಾರಲ್ ಗನ್‍ನ್ನು ಮರಳಿ ಮನೆಗೆ ತಂದಿದ್ದ. ಪಂಚಾಯಿತಿ ಚುನಾವಣೆ ವೇಳೆ ಇದನ್ನು ನಾವು ಸ್ಥಳೀಯ ಪೊಲೀಸ್ ಠಾಣೆಗೆ ನೀಡಿದ್ದೆವು. ಇದೀಗ ಗನ್‍ನ್ನು ಮರಳಿ ಮನೆಗೆ ತಂದು 2ನೇ ಮಹಡಿಯ ರೂಂನಲ್ಲಿ ಇರಿಸಿದ್ದೆವು. ಇದನ್ನು ಹಿಡಿದು ರಾಧಿಕಾ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಳು ಎಂದು ಮಹಿಳೆಯ ಮಾವ ರಾಜೇಶ್ ಗುಪ್ತಾ ತಿಳಿಸಿದರು.
ಶಹಬಾದ್ ಎಸ್‍ಎಚ್‍ಒ ಶಿವಶಂಕರ್ ಸಿಂಗ್ ಈ ಕುರಿತು ಪ್ರತಿಕ್ರಿಯಿಸಿ, 12 ಬೋರ್ ನ ಸಿಂಗಲ್ ಬ್ಯಾರಲ್ ಗನ್ ಹಾಗೂ ಸಂತ್ರಸ್ತೆಯ ಮೊಬೈಲ್ ವಶಪಡಿಸಿಕೊಂಡಿದ್ದೇವೆ. ಫೊರೆನ್ಸಿಕ್ ಪರೀಕ್ಷೆಗೆ ಕಳುಹಿಸಿದ್ದೇವೆ. ಗನ್ ಜೊತೆ ಸಂತ್ರಸ್ತೆ ಇರುವ ಫೋಟೋ ಸಹ ಸಿಕ್ಕಿದೆ. ಅವಳು ಸಾಯುವುದಕ್ಕೂ ಕೆಲಸ ಸೆಕೆಂಡುಗಳ ಮುಂಚೆ ಈ ಫೋಟೋ ಕ್ಲಿಕ್ಕಿಸಲಾಗಿದೆ. ಮೃತ ದೇಹವನ್ನು ಪೋಸ್ಟ್‍ಮಾರ್ಟಮ್‍ಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಪತಿ ಆಕಾಶ್ ಅವರನ್ನೂ ವಿಚಾರಣೆಗೊಳಪಡಿಸಿದ್ದು, ನನ್ನ ಪತ್ನಿ ರಾಧಿಕಾ ಗುಪ್ತಾ ಗನ್ ನೋಡಲು ತುಂಬಾ ಉತ್ಸುಕಳಾಗಿದ್ದಳು. ಅವಳಾಗಲೇ ಗನ್ ಜೊತೆ ಫೋಟೋ ತೆಗೆದುಕೊಂಡಿದ್ದಳು. ಆದರೆ ಇನ್ನೂ ಹೆಚ್ಚು ಬೇಕೆಂದು ತೆಗೆಯಲು ಮುಂದಾಗಿದ್ದಳು. ಹೀಗೆ ಸೆಲ್ಫಿ ತೆಗೆದುಕೊಳ್ಳುವಾಗ ಟ್ರಿಗರ್ ಒತ್ತಿದ್ದು, ಬಳಿಕ ಗುಂಡು ಹಾರಿದೆ ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Indresh KC

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

3 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

4 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

4 hours ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

4 hours ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

5 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

6 hours ago