ತಮ್ಮನ ಕಣ್ಣು ಮುಂದೆಯೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ

 

ಚಾಮರಾಜನಗರ : ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರು ಸಹೋದರರಲ್ಲಿ ಓರ್ವ ಸಹೋದರ ಬೈಕ್ ನಿಲ್ಲಿಸಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಳ್ಳೇಗಾಲ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಆತ್ಮಹತ್ಯೆಗೆ ಶರಣಾದವನನ್ನು ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕುರುಬಾಳನಹುಂಡಿ ಗ್ರಾಮದ ಬಸವರಾಧ್ಯ ಎಂದು ಗುರುತಿಸಲಾಗಿದೆ.
ಮೃತ ಬಸವಾರಾಧ್ಯ ಕಳೆದ 20 ದಿನಗಳ ಹಿಂದಷ್ಟೆ ಕನಕಪುರ ರಸ್ತೆ ಮಾರ್ಗದಲ್ಲಿ ಅಪಘಾತಕ್ಕಿಡಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿ ಮನೆಗೆ ಬಂದಿದ್ದ. ಇಂದು ತಮ್ಮ ಪ್ರಮೋದ್ ಜೊತೆ ಕೊಳ್ಳೇಗಾಲದ ಆಸ್ಪತ್ರೆಗೆ ಆರೋಗ್ಯ ತಪಾಸಣೆಗೆಂದು ಬರುವ ವೇಳೆ ಬಸವರಾಧ್ಯ ಬೈಕ್ ನಿಲ್ಲಿಸು ನನಗೆ ವಾಂತಿ ಬರುವಂತಿದೆ ಎಂದು ಹೇಳಿದ್ದಾನೆ. ಅಣ್ಣ ಮಾತಿನಂತೆ ಸಹೋದರ ಬೈಕ್ ನಿಲ್ಲಿಸಿದ್ದಾನೆ. ಈ ವೇಳೆ ಏಕಾಏಕಿ ಬಸವರಾಧ್ಯ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಶೋಧ ಕಾರ್ಯ ನಡೆಸಿದ್ದಾರೆ. ನೀರಿನ ಹರಿವು ಹೆಚ್ಚಾದ್ದರಿಂದ ಯುವಕ‌ನ ದೇಹ ಪತ್ತೆಯಾಗಿಲ್ಲ. ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Indresh KC

Recent Posts

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಮಹಿಳೆಯರಿಂದ ವಿಶೇಷ ಪೂಜೆ, ಪ್ರಾರ್ಥನೆ

ದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದು ಹೆಮ್ಮೆಯ ನಾಯಕ ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿ ಎಂದು ಪ್ರಾರ್ಥಿಸಿ ವಿಜಯಪುರ…

3 mins ago

ಅವರಿಗೆ ನೀವು ಆತ್ಮನಿರ್ಭರರಾಗಿರುವುದು ಇಷ್ಟವಿಲ್ಲ: ಪ್ರಿಯಾಂಕಾ ಗಾಂಧಿ

ಬಿಜೆಪಿ ನಿಮ್ಮನ್ನು ೫ಕೆಜಿ ರೇಷನ್ನಿನ ಮೇಲೆ ಅವಲಂಬಿತರನ್ನಾಗಿಸಲು ನೋಡುತ್ತಿದೆ. ನೀವು ಆತ್ಮನಿರ್ಭರರಾಗುವುದನ್ನು ಅವರು ಸಹಿಸುವುದಿಲ್ಲ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ…

4 mins ago

ಚಾಮರಾಜನಗರ: ಸಿಡಿಲು ಬಡಿದು ಮೂರು ಜಾನುವಾರುಗಳು ಸಾವು

ಸಿಡಿಲು ಬಡಿದು ಮೂರು ಜಾನುವಾರುಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹನೂರು ತಾಲ್ಲೂಕಿನ ಚೆನ್ನೂರು ಗ್ರಾಮದಲ್ಲಿ ನಡೆದಿದೆ.

26 mins ago

ರಾಯ್‌ಬರೇರಿಯಲ್ಲಿ ರಾಹುಲ್‌ ಗಾಂಧಿ ನಾಮಪತ್ರ ಸಲ್ಲಿಕೆ; ಕಿಶೋರಿ ಶರ್ಮಾ ಪಾಲಾದ ಅಮೇಥಿ

ರಾಯ್‌ಬರೇಲಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿರು ಕಾಂಗ್ರೆಸ್‌ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಕಡೆಗೂ ತೆರೆ ಬಿದ್ದಿದ್ದು, ರಾಹುಲ್‌ ಗಾಂಧಿ ತಮ್ಮ…

32 mins ago

ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ

ಕಾರ್ಕಳದಲ್ಲಿ ಕಳೆದ ವರ್ಷದಿಂದ ವಿವಾದದ ಕೇಂದ್ರ ಬಿಂದುವಾಗಿದ್ದ ಪರಶುರಾಮ ಮೂರ್ತಿ ಮತ್ತೆ ಹಲವಾರು ಊಹಾಪೋಹಗಳಿಗೆ ಕಾರಣವಾಗುತ್ತಿದೆ. ನಿನ್ನೆಯಿಂದ ಮೂರ್ತಿಯ ಉಳಿದ…

56 mins ago

ಅನ್ನದಾತರ ಕನಸಿಗೆ ಬರೆ ಎಳೆದ ಗಾಳಿ ಮಳೆ: ಎಕರೆಗಟ್ಟಲೇ ಬಾಳೆ ಫಸಲು ನಾಶ

ಬಿಸಿಲಿನ ತಾಪಮಾನದಿಂದ ಬಸವಳಿದ್ದ ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಚಾಮರಾಜನಗರ ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನ ವರುಣಾಗಮನದಿಂದಾಗಿ ತಂಪಿನ…

56 mins ago