News Karnataka Kannada
Monday, April 29 2024
ಉತ್ತರ ಪ್ರದೇಶ

ಪಬ್ ಜಿ ಆಡಬೇಡ ಎಂದು ಹೇಳಿದಕ್ಕೆ,ಅಮ್ಮನನ್ನು ಹತ್ಯೆಗೈದ ಬಾಲಕ

Untitled 2
Photo Credit :

ಲಕ್ನೋ: ಬಹಳ ಅಪಾಯಕಾರಿ ಮೊಬೈಲ್ ಗೇಮ್​ಗಳಲ್ಲಿ ಒಂದಾದ ಪಬ್​ಜಿ ಮತ್ತೊಂದು ಜೀವವನ್ನು ಬಲಿ ಪಡೆದಿದೆ. ಮೊಬೈಲ್ ಹಿಡಿದು ಯಾವಾಗಲೂ ಪಬ್​ಜಿ ಆಡುತ್ತಿದ್ದ 16 ವರ್ಷದ ಮಗನಿಗೆ ಇನ್ನುಮುಂದೆ ಈ ಆಟ ಆಡಬಾರದು ಎಂದು ಅಮ್ಮ ಎಚ್ಚರಿಸಿದ್ದಳು. ಪಬ್​ಜಿ ಆಡಬೇಡ ಎಂದ ಅಮ್ಮನ ಮೇಲೆ ಕೋಪಗೊಂಡ ಮಗ ತನ್ನ ತಾಯಿಯನ್ನು ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ಲಕ್ನೋದಲ್ಲಿ ನಡೆದಿದೆ.

16 ವರ್ಷದ ಈ ಬಾಲಕ ಸದಾ ಪಬ್​ಜಿ ಆಡುವ ಚಟ ಹೊಂದಿದ್ದ. ಮೊಬೈಲ್ ಗೇಮ್​ಗೆ ಅಡಿಕ್ಟ್​ ಆಗಿದ್ದ ಆತನಿಂದ ಅಮ್ಮ ಬೇಸತ್ತಿದ್ದಳು. ಹೀಗಾಗಿ, ಆತನಿಗೆ ಆಗಾಗ ಬೈಯುತ್ತಿದ್ದಳು. ಆದರೆ, ಮಗನಿಗೆ ಬುದ್ಧಿವಾದ ಹೇಳಿದ ಆಕೆ ಮಗನಿಂದಲೇ ಕೊಲೆಯಾಗಿದ್ದಾಳೆ. ಈ ಕೊಲೆ ನಡೆದು 2 ದಿನಗಳ ಬಳಿಕ ವಿಷಯ ತಿಳಿದ ಕೂಡಲೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಅಪ್ರಾಪ್ತ ಬಾಲಕ ತನ್ನ ತಾಯಿ ಪಬ್ ಜಿ ಆಟವಾಡುವುದನ್ನು ವಿರೋಧಿಸಿದ್ದಕ್ಕಾಗಿ ಅಪ್ಪನ ರಿವಾಲ್ವರ್​ನಿಂದ ಗುಂಡು ಹಾರಿಸಿದ್ದಾನೆ ಎಂದು ತಿಳಿಸಿದ್ದಾರೆ.

ಅಮ್ಮನಿಗೆ ಶೂಟ್ ಮಾಡಿ ಕೊಂದ ಬಳಿಕ ಭಯಗೊಂಡ ಆ ಬಾಲಕ ಆ ಹೆಣವನ್ನು ಮನೆಯಲ್ಲೇ ಮುಚ್ಚಿಟ್ಟಿದ್ದಾನೆ. ಮರುದಿನ ಹೆಣದ ವಾಸನೆ ಮನೆಯಲ್ಲಿ ಹರಡಿದ ಬಳಿಕ ಆತ ಮನೆಗೆ ಏರ್​ ಫ್ರೆಷನರ್ ಹೊಡೆದು ವಾಸನೆ ಹರಡದಂತೆ ಪ್ಲಾನ್ ಮಾಡಿದ್ದಾನೆ. 16 ವರ್ಷದ ಯುವಕ ಭಾನುವಾರ ಮುಂಜಾನೆ ತನ್ನ ತಂದೆಯ ಲೇಸೆನ್ಸ್​ ಇರುವ ರಿವಾಲ್ವರ್‌ನಿಂದ ತನ್ನ ತಾಯಿಯನ್ನು ಶೂಟ್ ಮಾಡಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಲೆಗೆ ಗುಂಡು ತಗುಲಿದ ಮಹಿಳೆ ಸ್ವಲ್ಪ ಸಮಯದ ನಂತರ ಸಾವನ್ನಪ್ಪಿದ್ದಾಳೆ.

ಆ ಮನೆಯಲ್ಲಿ ಆತನ 9 ವರ್ಷದ ತಂಗಿ ಕೂಡ ಇದ್ದಳು. ಆದರೆ, ಆಕೆಗೆ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನೂ ಕೊಲ್ಲುವುದಾಗಿ ಹೆದರಿಸಿ, ಅಮ್ಮನ ಹೆಣವನ್ನು ರೂಮೊಂದರಲ್ಲಿ ಇರಿಸಿ, ಮನೆಗೆ ರೂಮ್​ ಫ್ರೆಷನರ್ ಸಿಂಪಡಿಸಿದ್ದಾನೆ. ಕೆಲಸದ ನಿಮಿತ್ತ ಬೇರೆ ಊರಿನಲ್ಲಿದ್ದ ಆತನ ತಂದೆ 2 ದಿನಗಳ ಬಳಿಕ ಮನೆಗೆ ಬಂದಾಗ ಈ ವಿಷಯ ಗೊತ್ತಾಗಿದೆ. ಅಪ್ಪನ ಬಳಿ ಸುಳ್ಳು ಕತೆ ಕಟ್ಟಿದ ಬಾಲಕ ರಿಪೇರಿ ಕೆಲಸಕ್ಕೆಂದು ಮನೆಗೆ ಬಂದಿದ್ದ ಎಲೆಕ್ಟ್ರಿಷಿಯನ್ ತನ್ನ ತಾಯಿಯನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಹೇಳಿದ್ದ. ಹೀಗಾಗಿ, ಆತನ ತಂದೆ ಪೊಲೀಸರಿಗೆ ಈ ವಿಷಯವನ್ನು ತಿಳಿಸಿದ್ದರು.

ಆ ಬಾಲಕನ ತಂದೆ ಸೇನಾಧಿಕಾರಿಯಾಗಿದ್ದು, ಪ್ರಸ್ತುತ ಪಶ್ಚಿಮ ಬಂಗಾಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿಷಯ ತಿಳಿದ ಕೂಡಲೆ ಆ ಮನೆಗೆ ಬಂದ ಪೊಲೀಸರಿಗೆ ಆ ಬಾಲಕ ಅದೇ ಕತೆಯನ್ನು ಹೇಳಿದ್ದ. ಆದರೆ, ಪೊಲೀರು ತನಿಖೆ ನಡೆಸಲು ಆ ಹುಡುಗನನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಭಯಗೊಂಡ ಆತ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು