ನವದೆಹಲಿ : ಉತ್ತರ ಪ್ರದೇಶದ ಮುಖ್ಯಮಂತ್ರಿ ಕಚೇರಿಯ ಟ್ವೀಟರ್ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿರುವ ಘಟನೆ ನಡೆದಿದೆ.ಸುಮಾರು 4 ತಾಸುಗಳ ಬಳಿಕ ಭಾಗಶಃ ಸರಿಪಡಿಸಲಾಗಿದ್ದು, ಹ್ಯಾಕ್ ಮಾಡಿದ ಕಿಡಿಗೇಡಿಗಳು ಮಾಡಿದ್ದ ಟ್ವೀಟ್ ಗಳನ್ನು ಡಿಲೀಟ್ ಮಾಡಲಾಗಿದೆ.
ಸುಮಾರು 4 ತಾಸುಗಳ ಬಳಿಕ ಭಾಗಶಃ ಸರಿಪಡಿಸಲಾಗಿದೆ.ಇಂದು ಮುಂಜಾನೆ ಹೊತ್ತಿಗೆ ಕಿಡಿಗೇಡಿಗಳು ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿಯ ಟ್ವೀಟರ್ ಹ್ಯಾಕ್ ಮಾಡಿದ್ದರು.
ಯುಪಿ ಮುಖ್ಯಮಂತ್ರಿ ಕಚೇರಿಯ ಟ್ವೀಟರ್ ಹ್ಯಾಕ್ ಮಾಡಿದ ಕಿಡಿಗೇಡಿಗಳು ಖಾತೆಯಿಂದ 100 ಕ್ಕೂ ಹೆಚ್ಚು ಅಧಿಕ ಟ್ವೀಟ್ ಮಾಡಿದ್ದರು. ಅಲ್ಲದೆ ಟ್ವೀಟರ್ ಖಾತೆಯ ಪ್ರೋಫೈಲ್ ನಲ್ಲಿದ್ದ ಯೋಗಿ ಆದಿತ್ಯನಾಥ್ ಫೋಟೋವನ್ನು ತೆಗೆದು ಹಾಕಿದ್ದರು.