ಉತ್ತರ ಪ್ರದೇಶ: ಗ್ಯಾಸ್‌ ಗೀಜರ್‌ಗೆ ಬಲಿಯಾದ ಮದುಮಗಳು

ಫಿರೋಜಾಬಾದ್‌ (ಉತ್ತರ ಪ್ರದೇಶ) : ಸ್ನಾನಕ್ಕೆಂದು ಗ್ಯಾಸ್‌ ಗೀಸರ್‌ ಬಳಸುತ್ತಿದ್ದರೆ ತುಂಬಾ ಎಚ್ಚರಿಕೆಯಿಂದ ಇರಿ. ಇದಾಗಲೇ ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಅನಿಲ ಸೋರಿಕೆಯಿಂದ ತಾಯಿ, ಮಗು ಮೃತಪಟ್ಟಿರುವ ಘಟನೆ ನಡೆದಿತ್ತು. ಅದರ ಬೆನ್ನಲ್ಲೇ ಇದೀಗ ಮದುಮಗಳೊಬ್ಬಳು ತನ್ನ ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶ ರಾಜ್ಯದ ಫಿರೋಜಾಬಾದ್‌ನಲ್ಲಿ ನಡೆದಿದೆ.

27 ವರ್ಷದ ಬ್ಯಾಂಕ್ ಉದ್ಯೋಗಿ ನಿಧಿ ಗುಪ್ತಾ ಮದುವೆಯಾಗಿ ಮೂರೇ ದಿನಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ. ಬಳೆ ಉದ್ಯಮಿ ನಿಶ್ಚಲ್ ಗುಪ್ತಾ ಎಂಬುವರನ್ನು ಮೂರು ದಿನಗಳ ಹಿಂದೆ ಮದುವೆಯಾಗಿದ್ದ ನಿಧಿ ಗ್ಯಾಸ್‌ ಗೀಜರ್‌ಗೆ ಬಲಿಯಾಗಿದ್ದಾರೆ.

ನಿಧಿಯ ಗಂಡನ ಮನೆಯ ಬಾತ್‌ರೂಂಗೆ ಗ್ಯಾಸ್ ಗೀಸರ್ ಅಳವಡಿಸಲಾಗಿದೆ. ಗ್ಯಾಸ್‌ ಲೀಕ್‌ ಆಗಿ ಸೋರುತ್ತಿತ್ತು. ಅದು ವಾಸನೆ ಬೀರುತ್ತಿದ್ದರೂ ನಿಧಿ ಅದನ್ನು ಅಷ್ಟು ಗಮನಿಸಲೇ ಇಲ್ಲ. ಸ್ನಾನಕ್ಕಿಳಿದ ಅವರು ಬಾತ್‌ರೂಮಿನ ಬಾಗಿಲು ಹಾಕಿಕೊಂಡಿದ್ದಾರೆ. ಅಲ್ಲಿಗೆ ಹೋಗಿ ಉಸಿರು ಎಳೆದುಕೊಂಡದ್ದೇ ಉಸಿರೇ ಕಟ್ಟಿದೆ. ಜೋರಾಗಿ ಕಿರುಚಾಡಿದ ಅವರು ಬಾಗಿಲು ಬಡಿದಿದ್ದಾರೆ. ಆದರೆ ಅದು ಹೊರಗಿನವರಿಗೆ ಕೇಳಿಸುವ ಮೊದಲೇ ವಿಷಾನಿಲ ಆಕೆಯ ದೇಹ ಸೇರಿ ಪ್ರಾಣಪಕ್ಷಿ ಹಾರಿ ಹೋಗಿದೆ!

ಮದುವೆಯ ಮನೆಯಾಗಿದ್ದರಿಂದ ನೆಂಟರಿಷ್ಟರು ತುಂಬಿದ್ದರು. ಮನೆಯಲ್ಲಿ ಗಲಾಟೆ ಜೋರಾಗಿತ್ತು. ನಿಧಿ ಉಸಿರುಗಟ್ಟಿದಾಗ ಬಾಗಿಲು ತೆರೆಯುವ ಪ್ರಯತ್ನ ಮಾಡಿದ್ದಾರೆ. ಆ ಕ್ಷಣದಲ್ಲಿ ಅದು ಸಾಧ್ಯವಾಗಲಿಲ್ಲ. ಆದ್ದರಿಂದ ಜೋರಾಗಿ ಬಾಗಿಲು ಬಡಿದರೂ ಅದು ಗಲಾಟೆಯ ಮನೆಯಲ್ಲಿ ಕೇಳಿಸಲೇ ಇಲ್ಲ. ಹೊತ್ತು ಕಳೆದರೂ ನಿಧಿ ಹೊರಗೆ ಬರದಾಗ ನೆಂಟರು ಬಾಗಿಲು ಬಡಿದಿದ್ದಾರೆ. ಯಾವುದೇ ಸೂಚನೆ ಒಳಗಿನಿಂದ ಬರದಾಗ ಗಾಬರಿಯಾಗಿದ್ದಾರೆ.

ನಂತರ ಬಾಗಿಲು ಒಡೆದು ನೋಡಿದಾಗ ನಿಧಿ ಅಲ್ಲಿಯೇ ಶವವಾಗಿ ಬಿದ್ದಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.

ಗ್ಯಾಸ್ ಗೀಸರ್‌ನೊಳಗೆ ಕಾರ್ಬನ್ ಮೊನಾಕ್ಸೈಡ್ ಎಂಬ ಅನಿಲ ಇರುತ್ತದೆ. ಇದು ಉಸಿರಾಡಿದರೆ ತುಂಬಾ ಅಪಾಯಕಾರಿ. ಮನುಷ್ಯನ ದೇಹಕ್ಕೆ ಸೇರಿದರೆ ಕೇಂದ್ರ ನರಮಂಡಲವನ್ನು ಹಾನಿ ಮಾಡುತ್ತದೆ. ಬಳಿಕ ಹೃದಯದ ಮೇಲೆ ಹೆಚ್ಚು ಅವಲಂಬಿತವಾಗಿರುವ ಅಂಗ ವ್ಯವಸ್ಥೆಯೂ ಹಾಳಾಗುತ್ತದೆ. ಇವೆಲ್ಲಾ ಆಗಲು ಐದು ನಿಮಿಷವೂ ಹಿಡಿಯುವುದಿಲ್ಲ. 2-3 ನಿಮಿಷಗಳಲ್ಲಿಯೇ ಉಸಿರಾಟದ ತೊಂದರೆ ಕಾಣಿಸಿಕೊಂಡು ಮನುಷ್ಯ ಪ್ರಜ್ಞಾಹೀನನಾಗುತ್ತಾನೆ. ಕೂಡಲೇ ಸಾವು ಸಂಭವಿಸುತ್ತದೆ.

Gayathri SG

Recent Posts

ಭಾರತದಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ ಅಕ್ಷಯ್‌ ಕುಮಾರ್‌

ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ 49…

23 seconds ago

ಕಾಶ್ಮೀರ ವಾಪಸ್ ಪಡೆದೇ ಪಡೆಯುತ್ತೇವೆ: ಗೃಹ ಸಚಿವ ಅಮಿತ್ ಶಾ

ಪಾಕಿಸ್ತಾನದ ಬಳಿ ಪರಮಾಣು ಬಾಂಬ್​ ಇದೆ ಹಾಗಾಗಿ ನಾವು ಅವರನ್ನು ಗೌರವಿಸಬೇಕಾಗುತ್ತದೆ ಎಂಬ ಕಾಂಗ್ರೆಸ್​ ನಾಯಕ ಮಣಿಶಂಕರ್​ ಐಯ್ಯರ್​ ಹೇಳಿಕೆಗೆ…

19 mins ago

ಖಾಸಗಿ ಶಾಲೆಗಳಲ್ಲಿ 30% ವರೆಗೆ ಶುಲ್ಕ ಏರಿಕೆ : ಕಂಗಾಲಾದ ಪೋಷಕರು

2024-25ನೇ ಸಾಲಿಗೆ ಶಾಲಾ ಪ್ರವೇಶ ಪ್ರಕ್ರಿಯೆ ನಡೆಸುತ್ತಿರುವ ಖಾಸಗಿ ಶಾಲೆಗಳು ಶೇ.20ರಿಂದ 30ರವರೆಗೆ ಶುಲ್ಕ ಹೆಚ್ಚಿಸುವ ಮೂಲಕ ಸುಲಿಗೆ ಪದ್ಧತಿ…

45 mins ago

ಯುವಕನೊಬ್ಬ ಎಂಟು ಬಾರಿ ಮತ ಚಲಾಯಿಸಿದ ವೀಡಿಯೊ ವೈರಲ್

ಯುವಕನೋರ್ವ ಬಿಜೆಪಿ ಅಭ್ಯರ್ಥಿಗೆ ಎಂಟು ಬಾರಿ ಮತಹಾಕಿರುವ ಘಟನೆ ಉತ್ತರ ಪ್ರದೇಶದ ಇಟಾ ಜಿಲ್ಲೆಯ ನಯಾ ಗಾಂವ್ ಪಟ್ಟಣದಲ್ಲಿ ನಡೆದಿದೆ.…

1 hour ago

ʻಮೋದಿಗೆ ಯಾರೂ ವೋಟ್ ಹಾಕಬೇಡಿ’ ಎಂದಿದ್ದ ಶಿಕ್ಷಕ ಅರೆಸ್ಟ್‌

ಯಾರು ಮೋದಿಗೆ ವೋಟ್​ ಹಾಕಬೇಡಿ ಎಂದು ಶಾಲಾ ಮಕ್ಕಳಿಗೆ ಹೇಳಿದ್ದ ಸರ್ಕಾರಿ ಶಾಲೆಯ ಶಿಕ್ಷಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ…

1 hour ago

ರೇವ್‌ ಪಾರ್ಟಿ ಮೇಲೆ ಪೊಲೀಸ್‌ ದಾಳಿ : ತೆಲುಗು ನಟಿ, ಮಾಡೆಲ್​ ಸಿಸಿಬಿ ವಶಕ್ಕೆ

ಸಿಸಿಬಿ ಪೊಲೀಸರು ರಾಜಧಾನಿಯಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯೊಂದರ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಆಂಧ್ರಪ್ರದೇಶದಿಂದ ತೆಲುಗು ನಟಿಯರನ್ನು ಕರೆಸಿಕೊಂಡು…

1 hour ago