News Karnataka Kannada
Monday, April 29 2024
ಉತ್ತರ ಪ್ರದೇಶ

ಅಟಮೋಸ್ ಪವರ್ ಸಂಸ್ಥೆ ಸ್ಥಾಪಿಸಿರುವ ಗೋಬರ್ ಗ್ಯಾಸ್ ಘಟಕಕ್ಕೆ ಸಚಿವ ಪ್ರಭು ಚವ್ಹಾಣ್ ಭೇಟಿ

Shivamogga: ‘Financial assistance to be given for private gaushalas’
Photo Credit :

ಉತ್ತರಪ್ರದೇಶ : ಉತ್ತರಪ್ರದೇಶದ ವಾರಣಾಸಿಯ ಶೇಹನ್ ಶಾಪುರ್ ಪ್ರದೇಶದಲ್ಲಿರುವ ಕಾನ್ಹಾ ಉಪವನ ಗೋಶಾಲೆಗೆ ಮತ್ತು ಅಟಮೋಸ್ ಪವರ್ ಸಂಸ್ಥೆ ಸ್ಥಾಪಿಸಿರುವ ಗೋಬರ್ ಗ್ಯಾಸ್ ಘಟಕಕ್ಕೆ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಗೋವುಗಳ ಹಾಗೂ ಆಧಾರಿತ ಕೃಷಿಯ ಬಗ್ಗೆ ಹೆಚ್ಚು ಕಳಕಳಿ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಕ್ಷೇತ್ರದಲ್ಲಿ ಉದ್ಘಾಟನೆಗೊಂಡ ಅಟಮೋಸ್ ಗೋಬರ್ ಘಟಕ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ್ದು ರೈತರ ಪರ ಅವರ ಕಾಳಜಿಯನ್ನು ತೋರುತ್ತದೆ ಎಂದರು.

ಉತ್ತರ ಪ್ರದೇಶ ಮಹಾರಾಷ್ಟ್ರ ಮತ್ತು ಗುಜರಾತ್ ಪ್ರವಾಸದಲ್ಲಿರುವ ಸಚಿವರು ಉತ್ತರ ಪ್ರದೇಶದ ಶಾಲೆಗಳಿಗೆ ಭೇಟಿ ಗೋಶಾಲೆಗಳ ನಿರ್ವಹಣ ಮಾದರಿಗಳ ಕುರಿತು ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಅಟಮೊಸ್ ಪವರ್ ಸಂಸ್ಥೆಯಿಂದ ನಿರ್ಮಿಸಲಾಗಿರುವ ಗೋಬರ್ ಗ್ಯಾಸ್ ಘಟಕದಲ್ಲಿ ನಿತ್ಯ 90 ಟನ್ ಗೊಬ್ಬರನ್ನು ಸಂಗ್ರಹಿಸಿ ಗ್ಯಾಸ್ ಉತ್ಪಾದನೆ ಮಾಡಿ ಅದನ್ನು ಸಿಲಿಂಡರ್ ನಲ್ಲಿ ತುಂಬಿಸಿ ಮಾರಾಟಮಾಡಲಾಗುತ್ತಿದೆ. ಘಟಕದಲ್ಲಿನ ಗ್ಯಾಸ್ ಉತ್ಪಾದನೆ ಆದನಂತರ ಉಳಿದಿರುವ ಸ್ಲರಿ ಮತ್ತು ಬಗಾಸೆಯಿಂದ ರಸಗೊಬ್ಬರವನ್ನು ತಯಾರು ಮಾಡಿ ಗೋಆಧಾರಿತ ಕೃಷಿಗೆ ಉತ್ತೇಜನ ನೀಡುತ್ತಿದ್ದಾರೆ ಎಂದರು.

ಉತ್ತರಪ್ರದೇಶದ ವಾರಣಾಸಿಯ ಶಹನಶಾಹಪುರ ಘಟಕದಲ್ಲಿ ಉತ್ಪಾದನೆಯಾಗುತ್ತಿರುವ ಗೊಬ್ಬರವನ್ನು ಸ್ಥಳೀಯರು ಹೆಚ್ಚು ಬಳಕೆ ಮಾಡಿಕೊಳ್ಳುತ್ತಾರೆ. ಈ ಭಾಗದ ರೈತರು ಗೋವು ಆಧಾರಿತ ಅಥವಾ ಪಾರಂಪರಿಕ ಕೃಷಿಯನ್ನು ಹೆಚ್ಚು ಅವಲಂಬಿಸಿದ್ದಾರೆ ಎಂದು ಸಚಿವರು ತಮ್ಮ ಅನುಭವವನ್ನು ತಿಳಿಸಿದ್ದಾರೆ.

ಸುಮಾರು ಇಪ್ಪತ್ತಕ್ಕೂ ಹೆಚ್ಚು ಹತ್ತಿರದ ಹಳ್ಳಿಗಳಿಂದ ಗೊಬ್ಬರವನ್ನು ಸಂಗ್ರಹಿಸಿ 90 ಮೆಟ್ರಿಕ್ ಟನ್ ವರೆಗೆ ಗ್ಯಾಸ್ ಉತ್ಪಾದನೆ ಮಾಡಲಾಗುತ್ತದೆ. ಹಾಗೂ ಪ್ರತಿ ಕೆಜಿಗೆ ರೂ.1 ರಂತೆ ಗೊಬ್ಬರವನ್ನು ಖರೀದಿ ಮಾಡುತ್ತಾರೆ. ಸುಮಾರು 5 ರಿಂದ 225 ಟನ್ ಗೊಬ್ಬರ ದಿಂದ ಗ್ಯಾಸ್ ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ಅಟಮೋಸ್ ಘಟಕ ಹೊಂದಿದೆ. ಕಸಾಯಿಖಾನೆಗೆ ಸಾಗಿಸುತ್ತಿದ್ದ ಸುಮಾರು 300ಕ್ಕೂ ಹೆಚ್ಚು ಗೋವುಗಳನ್ನು ಇಲ್ಲಿ ಸಾಕಲಾಗಿದ್ದು ನಿತ್ಯ ಆರೋಗ್ಯ ಮತ್ತು ಆಹಾರಕ್ಕೆ ಹೆಚ್ಚಿನ ಒತ್ತು ನೀಡಿ ಆರೈಕೆ ಮಾಡಲಾಗುತ್ತಿದೆ. ಅಲ್ಲದೆ ಸುತ್ತಮುತ್ತಲ ಪ್ರದೇಶದ ರೈತರಿಗೆ ಹಾಗೂ ಜಾನುವಾರು ಸಾಕಣೆದಾರರಿಗೆ ಗೋವುಗಳನ್ನು ಸಾಕಲು ಆಗದೇ ಇದ್ದ ಸಂದರ್ಭದಲ್ಲಿ ಅವುಗಳನ್ನು ಗೋಶಾಲೆಗೆ ಬಿಡಲು ಮನವಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ಬಹುತೇಕ ಹಸುಗಳು ಕಟುಕರ ಕೈಸೇರುವುದರಿಂದ ಉಳಿದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು