ನೈನಿತಾಲ್: ಭೂಕುಸಿತದಿಂದ ಮನೆಯೊಂದು ಕುಸಿದು ಬೀಳುತ್ತಿರುವ ದೃಶ್ಯ ಇಂದು ಉತ್ತರಾಖಂಡದಲ್ಲಿ ಕಂಡುಬಂದಿದೆ. ನೈನಿತಾಲ್ನ ಹಲವು ಪ್ರದೇಶಗಳಲ್ಲಿ ಇಂದು ಮುಂಜಾನೆ ಭೂಕುಸಿತ ಸಂಭವಿಸಿದ್ದು, ವಿವಿಧ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಬಿರುಕುಗಳು ಕ್ರಮೇಣ ವಿಸ್ತಾರಗೊಂಡು ಕುಸಿತಕ್ಕೆ ಕಾರಣವಾಗಿದೆ.
ವೀಡಿಯೊದಲ್ಲಿ, ಎರಡು ಅಂತಸ್ತಿನ ಮನೆಯು ಇಳಿಜಾರಿನಲ್ಲಿ ಜಾರಿಕೊಂಡು ನೆಲಕ್ಕೆ ಕುಸಿಯುವುದನ್ನು ನೋಡಬಹುದು. ಸುಮಾರು ಹತ್ತಾರು ಕೊಠಡಿಗಳಿದ್ದ ಮನೆಯನ್ನು ಅಪಘಾತದ ಮುನ್ನವೇ ಖಾಲಿ ಮಾಡಿದ್ದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ನೈನಿತಾಲ್ನ ಮಲ್ಲಿತಾಲ್ ಪ್ರದೇಶದಲ್ಲಿನ ಸುತ್ತಮುತ್ತಲಿನ ಮನೆಗಳನ್ನೂ ಈಗ ತೆರವು ಮಾಡಲಾಗುತ್ತಿದೆ ಎಂದು ವರದಿಯಾಗಿದೆ.
House collapsed in nainital due to landslide. pic.twitter.com/EP1CFUZ1su
— Uttarakhand Mirror (@MirrorTV1436218) September 23, 2023