ವಾಷಿಂಗ್ಟನ್: ಜನಪ್ರಿಯ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ನ ಲೋಗೋ ಇದೀಗ ಅಧಿಕೃತವಾಗಿ ಬದಲಾವಣೆಯಾಗಿದೆ. ವರ್ಷಗಳ ಐಕಾನಿಕ್ ನೀಲಿ ಬಣ್ಣದ ಹಕ್ಕಿ ಇದೀಗ ಮಾಯವಾಗಿದ್ದು, ಎಕ್ಸ್ (X) ಲೋಗೋ ಇದೀಗ ಕಾಣಿಸಿಕೊಳ್ಳುತ್ತಿದೆ.
ಟ್ವಿಟ್ಟರ್ ಅನ್ನು ಖರೀದಿಸಿರುವ ಎಲೋನ್ ಮಸ್ಕ್ ಅಪ್ಲಿಕೇಶನ್ ಅನ್ನು ರೀಬ್ರ್ಯಾಂಡ್ ಮಾಡುವ ಉದ್ದೇಶದಿಂದ ಅದರ ಲೋಗೋ ಹಾಗೂ ಹೆಸರನ್ನು ಬದಲಿಸಲು ಮುಂದಾಗಿದ್ದಾರೆ. ಎಲೋನ್ ಮಸ್ಕ್ ಸೋಮವಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಟ್ವಿಟ್ಟರ್ನ ಪ್ರಧಾನ ಕಚೇರಿಯಲ್ಲಿ ಎಕ್ಸ್ ಬ್ರ್ಯಾಂಡಿಂಗ್ನ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಟ್ವಿಟ್ವರ್ನ CEO, ಲಿಂಡಾ ಯಾಕರಿನೊ, ಹೊಸ ಲೋಗೋದ ಫೋಟೋವನ್ನು ಟ್ವೀಟ್ ಮಾಡುವ ಮೂಲಕ ಈ ಸುದ್ದಿಯನ್ನು ದೃಢಪಡಿಸಿದ್ದಾರೆ.
“ಶೀಘ್ರದಲ್ಲಿಯೇ ಟ್ವಿಟ್ಟರ್ ಬ್ರ್ಯಾಂಡ್ಗೆ ಮತ್ತು ಎಲ್ಲಾ ಹಕ್ಕಿಗಳಿಗೆ ಕ್ರಮೇಣವಾಗಿ ನಾವು ವಿದಾಯ ಹೇಳಬೇಕಿದೆ” ಎಂದು ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದರು. ಟ್ವಿಟರ್ನ ವೆಬ್ಸೈಟ್ ನೀಲಿ ಹಕ್ಕಿಯ ಲೋಗೊ ‘ನಮ್ಮನ್ನು ಗುರುತಿಸುವ ಆಸ್ತಿ‘ ಎಂದು ಹೇಳುತ್ತದೆ ‘ಅದಕ್ಕಾಗಿಯೇ ನಾವು ಅದನ್ನು ರಕ್ಷಿಸುತ್ತಿದ್ದೇವೆ‘ಎಂದಿದ್ದಾರೆ. ಇದೇ ವೇಳೆ ಬಳಕೆದಾರರಿಗೆ ವೆರಿಫೈಡ್ ಅಕೌಂಟ್ ಮಾಡಿಕೊಳ್ಳಿ ಇದರಿಂದ ಜಾಹೀರಾತು ಆದಾಯ ಹಂಚಿಕೆಯಲ್ಲಿ ತಿಂಗಳಿಗೆ ಸಾವಿರಾರು ಡಾಲರ್ ಗಳಿಸಬಹುದು ಎಂದಿದ್ದರು.
ಮಸ್ಕ್ ಟ್ವಿಟ್ಟರ್ನ ನೀಲಿ ಹಕ್ಕಿಗೆ ಗುಡ್ಬೈ ಹೇಳುವ ಬಗೆಗಿನ ಟ್ವೀಟ್ನಿಂದಾಗಿ ಅವರು ಆ್ಯಪ್ ಅನ್ನು ರೀಬ್ರ್ಯಾಂಡ್ ಮಾಡಲು ಹೊರಟಿರುವುದು ದೃಢಪಟ್ಟಿತು. ಈ ಹಿಂದೆಯೇ Twitter Inc. ಅನ್ನು X Corp. ನೊಂದಿಗೆ ವಿಲೀನ ಮಾಡಲಾಗಿದೆ. ಇದೀಗ ಟ್ವಿಟ್ಟರ್ನ ಲೋಗೋ ಬದಲಾಗಿದೆ. ಮಂದೆ ಟ್ವಿಟ್ಟರ್ ಎಕ್ಸ್ ಹೆಸರಿನಲ್ಲಿಯೇ ಮುಂದುವರಿಯಲಿದೆ.
Our headquarters tonight pic.twitter.com/GO6yY8R7fO
— Elon Musk (@elonmusk) July 24, 2023