ಚೆನ್ನೈ: ಇತ್ತೀಚೆಗೆ ಡ್ರಗ್ಸ್ ಕೇಸ್ ವಿಚಾರಕ್ಕೆ ತೆಲುಗು ಸಿನಿಮಾ ಇಂಡಸ್ಟ್ರಿ ಬಹಳ ಸುದ್ದಿಯಾಗುತ್ತಲೇ ಇದೆ. ಈಗ ಟಾಲಿವುಡ್ ಫೇಮಸ್ ಡೈರೆಕ್ಟರ್ ಕ್ರಿಶ್ ಜಗರ್ಲಮುಡಿ ಅವರಿಗೂ ಡ್ರಗ್ಸ್ ಕೇಸ್ನಿಂದ ಸಂಕಷ್ಟ ಎದುರಾಗಿದೆ. ಱಡಿಸನ್ ಬ್ಲೂ ಡ್ರಗ್ಸ್ ಕೇಸ್ ಸಂಬಂಧ ದಾಖಲಾದ ಎಫ್ಐಆರ್ನಲ್ಲಿ ಕ್ರಿಶ್ ಜಗರ್ಲಮುಡಿ ಹೆಸರು ಉಲ್ಲೇಖಿಸಲಾಗಿದೆ ಎಂದು ಗಚ್ಚಿಬೌಲಿ ಪೊಲೀಸರು ತಿಳಿಸಿದ್ದಾರೆ.
ಗಚ್ಚಿಬೌಲಿ ಪೊಲೀಸರು ಇತ್ತೀಚೆಗೆ ಱಡಿಸನ್ ಬ್ಲೂ ಡ್ರಗ್ಸ್ ಕೇಸ್ನಲ್ಲಿ ಬಿಜೆಪಿ ನಾಯಕ ಯೋಗಾನಂದ ಪುತ್ರನನ್ನು ಅರೆಸ್ಟ್ ಮಾಡಿದ್ದರು. ರೇವ್ ಪಾರ್ಟಿಯಲ್ಲಿ ಕೊಕೈನ್ ಮತ್ತಿತರ ಡ್ರಗ್ಸ್ ಸೇವನೆ ಮಾಡಿದ ಆರೋಪದ ಮೇರೆಗೆ ಬಂಧನ ಮಾಡಲಾಗಿತ್ತು.
ಇನ್ನು, ಈ ಸಂಬಂಧ ಮಾತಾಡಿದ ನಿರ್ದೇಶಕ ಕ್ರಿಶ್, ತನ್ನ ಸ್ನೇಹಿತರನ್ನು ಭೇಟಿ ಮಾಡಲು ಱಡಿಸನ್ ಬ್ಲೂ ಹೋಟೆಲ್ಗೆ ಹೋಗಿದ್ದಾಗಿ ಮಾಹಿತಿ ನೀಡಿದ್ದಾರೆ. ಕೇವಲ ಅರ್ಧ ಗಂಟೆ ಮಾತ್ರ ಹೋಟೆಲ್ನಲ್ಲಿ ಇದ್ದು ಬಳಿಕ ಮರಳಿದ್ದಾಗಿ ಪೊಲೀಸರಿಗೆ ಸ್ಪಷ್ಟನೆ ನೀಡಿದ್ದಾರೆ.