ಹೈದರಾಬಾದ್: ಹೈದರಾಬಾದ್ ಸಮೀಪದ ಮೆಡ್ಚಲ್ ಎಂಬಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.
ಮೂಲಗಳ ಪ್ರಕಾರ, ಮೋಟರ್ ಬೈಕ್ ಟ್ರಕ್ ಅಡಿಯಲ್ಲಿ ಬಂದಾಗ ಈ ಅಪಘಾತ ಸಂಭವಿಸಿದೆ. ಮೋಟರ್ ಬೈಕ್ ನಲ್ಲಿದ್ದ ಇಬ್ಬರು ವ್ಯಕ್ತಿಗಳು ಮತ್ತು ರಸ್ತೆ ದಾಟುತ್ತಿದ್ದ ಇನ್ನೊಬ್ಬ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬೈಕ್ ಟ್ರಕ್ ಅನ್ನು ಓವರ್ ಟೇಕ್ ಮಾಡಲು ಪ್ರಯತ್ನಿಸುತ್ತಿತ್ತು. ಇದು ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದಿದೆ. ಮತ್ತು ಮೂವರ ಮೇಲೆ ಟ್ರಕ್ ಹಾದು ಹೋಗಿದೆ.
ಕಬ್ಬಿಣದ ಸರಳುಗಳನ್ನು ಹೊತ್ತ ಟ್ರಕ್ ಮೆಡ್ಚಲ್ ನಿಂದ ಹೈದರಾಬಾದ್ ಗೆ ಬರುತ್ತಿತ್ತು.