Categories: ತೆಲಂಗಾಣ

ಹೈದರಾಬಾದ್: ಪವಿತ್ರ ರಂಜಾನ್‌ ಅವಧಿಯಲ್ಲಿ 10 ಲಕ್ಷ ಬಿರಿಯಾನಿ ಆರ್ಡರ್‌

ಹೈದರಾಬಾದ್: ಹೈದರಾಬಾದ್‌ನ ಜನರು ಪವಿತ್ರ ರಂಜಾನ್ ತಿಂಗಳಿನಲ್ಲಿ ಪ್ರಮುಖ ಆಹಾರ-ವಿತರಣಾ ವೇದಿಕೆ ಸ್ವಿಗ್ಗಿಯಲ್ಲಿ 10 ಲಕ್ಷ ಬಿರಿಯಾನಿ ಮತ್ತು 4 ಲಕ್ಷ ಪ್ಲೇಟ್ ಹಲೀಮ್ ಅನ್ನು ಆರ್ಡರ್ ಮಾಡಿದ್ದಾರೆ. ಶುಕ್ರವಾರ ಸ್ವಿಗ್ಗಿ ಬಿಡುಗಡೆ ಮಾಡಿದ ರಂಜಾನ್ ಆರ್ಡರ್‌ ವರದಿಯು ರಂಜಾನ್ ಸಮಯದಲ್ಲಿ ನಗರದಲ್ಲಿನ ಆಹಾರದ ಪ್ರವೃತ್ತಿಯನ್ನು ವಿವರಿಸಿದೆ.

ಹೈದರಾಬಾದ್‌ ಜನರ ಮೆಚ್ಚಿನ ಸಾಂಪ್ರದಾಯಿಕ ಆಹಾರವಾದ ಹಲೀಮ್, ಚಿಕನ್ ಬಿರಿಯಾನಿ ಮತ್ತು ಸಮೋಸಾ ರಂಜಾನ್ ಸಮಯದಲ್ಲಿ ಅತ್ಯಂತ ಜನಪ್ರಿಯ ಭಕ್ಷ್ಯಗಳಾಗಿ ಉಳಿದಿವೆ ಎಂದು ಆರ್ಡರ್ ವಿಶ್ಲೇಷಣೆ ತಿಳಿಸಿದೆ. ದೇಶದ ಬಿರಿಯಾನಿ ರಾಜಧಾನಿ ಎಂದು ಹೆಸರು ಪಡೆದಿರುವ ಹೈದರಾಬಾದ್‌ನಲ್ಲಿ ಜನರು ರಂಜಾನ್‌ ಸಮಯದಲ್ಲಿ ಸ್ವಿಗ್ಗಿ ಮೂಲಕ 10 ಲಕ್ಷ ಬಿರಿಯಾನಿಗಳನ್ನು ಆರ್ಡರ್ ಮಾಡಿದ್ದಾರೆ. ಇದು ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ 20ರಷ್ಟು ಹೆಚ್ಚಾಗಿದೆ.

ರಂಜಾನ್ ವಿಶೇಷ ಖಾದ್ಯವಾದ ಹಲೀಮ್, ಚಿಕನ್, ಪಾಲಮುರು ಪಾಟೆಲ್, ಪರ್ಷಿಯನ್ ಸ್ಪೆಷಲ್ ಹಲೀಮ್ ಮತ್ತು ಡ್ರೈ ಫ್ರೂಟ್ ಹಲೀಮ್ ಸೇರಿದಂತೆ ಒಂಬತ್ತಕ್ಕೂ ಹೆಚ್ಚು ರೂಪಾಂತರಗಳಿಗೆ 4,00,000 ಕ್ಕೂ ಹೆಚ್ಚು ಆರ್ಡರ್‌ ದೊರೆತಿದೆ. ಹಬ್ಬದ ವಿಶೇಷಗಳಾದ ಮಾಲ್ಪುವಾ, ಫಿರ್ನಿ ಮತ್ತು ರಾಬ್ಡಿ ಆರ್ಡರ್‌ಗಳಲ್ಲಿ ಶೇಕಡಾ 20 ರಷ್ಟು ಏರಿಕೆ ಕಂಡಿದೆ. ಮಾರ್ಚ್ 23 ರಿಂದ ಏಪ್ರಿಲ್ 18 ರವರೆಗೆ ಸ್ವಿಗ್ಗಿಯಲ್ಲಿ ಮಾಡಿದ ಆರ್ಡರ್‌ಗಳ ವಿಶ್ಲೇಷಣೆಯ ಆಧಾರದ ಮೇಲೆ ಸಂಶೋಧನೆಗಳು ಆಧರಿಸಿವೆ.

ಪಿಸ್ತಾ ಹೌಸ್ ಹಲೀಮ್, ಪ್ಯಾರಡೈಸ್ ಬಿರಿಯಾನಿ ಮತ್ತು ಮೆಹ್ಫಿಲ್‌ನಂತಹ ರೆಸ್ಟೋರೆಂಟ್‌ಗಳು ಇಫ್ತಾರ್ ಸಮಯದಲ್ಲಿ ಹೈದರಾಬಾದ್‌ ನಿವಾಸಿಗಳ ಮೆಚ್ಚಿನ ರೆಸ್ಟೋರೆಂಟ್‌ಗಳಾಗಿದ್ದವು. ಸ್ವಿಗ್ಗಿ ರಂಜಾನ್ ಹಬ್ಬವನ್ನು ಆಚರಿಸಲು ವಿನೂತನ ಅಭಿಯಾನ ಆರಂಬಿಸಿದೆ. ಹೈದರಾಬಾದ್ ನಗರದ ಸಿಕಂದರಾಬಾದ್ ಮತ್ತು ಟೋಲಿಚೌಕಿ ಸ್ಥಳಗಳಲ್ಲಿ ಬರ್ನರ್ ಮೇಲೆ ಹಲೀಮ್ ಹ್ಯಾಂಡಿ ಹೊಂದಿರುವ ಜಾಹೀರಾತು ಫಲಕಗಳನ್ನು ಅಳವಡಿಸಿದೆ.

Gayathri SG

Recent Posts

ವಿಜೃಂಭಣೆಯಿಂದ ಜರುಗಿದ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನಾ ಮಹೋತ್ಸವ

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…

4 hours ago

ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿ: 40 ಜನರ ರಕ್ಷಣೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ  ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಘಟನೆ ನಡೆದಿದೆ. 

4 hours ago

ಮೋದಿಗೆ ಯಾರೂ ಮತ ಹಾಕಬೇಡಿ ಎಂದಿದ್ದ ಶಿಕ್ಷಕ ಅರೆಸ್ಟ್

ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೋದಿಗೆ ಯಾರೂ ಮತ ಹಾಕಬೇಡಿ ಎಂದು ಮಕ್ಕಳಿಗೆ ಹೇಳಿದ್ದಕ್ಕೆ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

4 hours ago

ಮೇ 24ರಿಂದ ಮೈಸೂರಿನಲ್ಲಿ ಮಾವು, ಹಲಸು ಮೇಳ

ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ  ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…

5 hours ago

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆ ಸಾವು

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ  ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್​ನಲ್ಲಿ ನಡೆದಿದೆ. 

5 hours ago

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಕೆರೆಯಲ್ಲಿ ಮುಳುಗಿ ಮೃತ್ಯು

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ…

5 hours ago