ಹೈದರಾಬಾದ್: ತೆಲಂಗಾಣ ಕಾಂಗ್ರೆಸ್ ಶಾಸಕ ಕವ್ವಂಪಲ್ಲಿ ಸತ್ಯನಾರಾಯಣ ಅವರ ಕಾರ್ಯಕ್ರಮವೊಂದರಲ್ಲಿ ಮಹಿಳೆಯೊಂದಿಗೆ ಅನುಚಿವಾಗಿ ವರ್ತಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಾಂಗ್ರೆಸ್ ಶಾಸಕ ಕವ್ವಂಪಲ್ಲಿ ಸತ್ಯನಾರಾಯಣ ಅವರು ಮಹಿಳೆಯೊಂದಿಗೆ ನಡೆದುಕೊಂಡ ರೀತಿಗೆ ಭಾರೀ ಟೀಕೆ ವ್ಯಕ್ತವಾಗಿದೆ.ಇದು ಯಾವ ಘಟನೆ ಎಂಬುದರ ನಿಖರವಾದ ವಿವರಗಳು ಇನ್ನೂ ಸ್ಪಷ್ಟವಾಗಿಲ್ಲ.
ಪದೇ ಪದೇ ದೂರ ಹೋಗಲು ಯತ್ನಿಸಿದ ಮಹಿಳೆಯ ಕೆನ್ನೆಗೆ ಕವ್ವಂಪಲ್ಲಿ ಸತ್ಯನಾರಾಯಣ ಅವರು ಕೇಕ್ ಹಾಕುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಒಂದೇ ಬಾರಿ ಅಲ್ಲ, ಕಾಂಗ್ರೆಸ್ ಶಾಸಕ ಹಲವು ಬಾರಿ ಮಹಿಳೆಗೆ ಹತ್ತಿರವಾಗುತ್ತಿರುವುದು ಕಂಡುಬಂದಿದೆ. ಪ್ರಸ್ತುತ ತೆಲಂಗಾಣದಲ್ಲಿ ಸಾರಿಗೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಕಾಂಗ್ರೆಸ್ ಸಚಿವ ಪೊನ್ನಂ ಪ್ರಭಾಕರ್ ಅವರ ಸಮ್ಮುಖದಲ್ಲಿ ಇದೆಲ್ಲವೂ ನಡೆದಿದೆ.