Categories: ತೆಲಂಗಾಣ

ಕಾಂಗ್ರೆಸ್‌ಗೆ ಮತಹಾಕಿದ್ರು ಗೆಲ್ಲುವುದು ಬಿಜೆಪಿಯೇ: ವಿವಾದಕ್ಕೆ ಕಾರಣವಾಯ್ತು ಸಂಸದನ ಹೇಳಿಕೆ

ಹೈದರಾಬಾದ್: ಜನರು ಯಾವುದೇ ಪಕ್ಷಕ್ಕೆ ಮತ ಹಾಕಿದರೂ ಗೆಲ್ಲುವುದು ಮಾತ್ರ ಬಿಜೆಪಿಯೇ ಎಂಬ ತೆಲಂಗಾಣ ಬಿಜೆಪಿ ಸಂಸದ ಡಿ.ಅರವಿಂದ್ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷ ಈ ವಿಚಾರದಲ್ಲಿ ಚುನಾವಣಾ ಆಯೋಗ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದೆ.

ತೆಲಂಗಾಣ ಬಿಜೆಪಿ ಸಂಸದ ಅರವಿಂದ್‌ ತಮ್ಮ ಕ್ಷೇತ್ರ ನಿಜಾಮಾಬಾದ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ್ದು ನೀವು ನೋಟಾಗೆ ಮತ ಹಾಕಿದರೆ ನಾನು ಗೆಲ್ಲುತ್ತೇನೆ. ‘ಕಾರ’ಕ್ಕೆ (ಬಿಆರ್ ಎಸ್) ಮತ ಹಾಕಿದರೆ ನಾನೇ ಗೆಲ್ಲುತ್ತೇನೆ. ‘ಕೈ’ಗೆ (ಕಾಂಗ್ರೆಸ್) ಮತ ಹಾಕಿದರೆ ‘ಕಮಲ್’ (ಬಿಜೆಪಿ) ಗೆಲ್ಲುತ್ತದೆ ಎಂದು ಹೇಳಿದ್ದರು. ಅರವಿಂದ್ ಅವರ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿದ ಬಿಆರ್‌ಎಸ್, ಭಾರತೀಯ ಚುನಾವಣಾ ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಬಿಆರ್‌ಎಸ್ ನಾಯಕಿ ಕೆ.ಕವಿತಾ ಚುನಾವಣಾ ಆಯೋಗ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ.

ಅಶೋಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಸಂಶೋಧನಾ ಪ್ರಬಂಧವು ಈಗಾಗಲೇ ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಟ್ಯಾಂಪರಿಂಗ್ ಬಗ್ಗೆ ದೇಶದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಈಗ ಸಂಸದರೊಬ್ಬರು ಇಂತಹ ಹೇಳಿಕೆ ನೀಡಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದನ್ನು ಭಾರತ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ.

Ashika S

Recent Posts

ನೂತನ ಆದಿ ಬಸವಮಂದಿರ ಮೂರ್ತಿ ಪ್ರತಿಷ್ಠಾನ ಮತ್ತು ಕಳಸಾರೋಹಣ ಕಾರ್ಯಕ್ರಮ

ಅಫಜಲಪುರ ತಾಲೂಕಿನ ಆನೂರ ಗ್ರಾಮದ ಆದಿ ಬಸವೇಶ್ವರ ನೂತನ ಕಳಸಾರೋಹಣ ಮತ್ತು ನೂತನ ಮಂದಿರ ಉದ್ಘಾಟನಾ ಕಾರ್ಯಕ್ರಮ ಹನ್ನೊಂದು ಮಠಗಳ…

14 mins ago

ಎಸ್ಎಸ್ಎಲ್ ಸಿ ಬಾಲಕಿಯ ಹತ್ಯೆ ಪ್ರಕರಣ: ಆರೋಪಿಯ ಬಂಧನ

ಎಸ್ಎಸ್ಎಲ್ ಸಿ ಬಾಲಕಿಯ ರುಂಡ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋವಿ ಹಿಡಿದು ಕಾಡಿನಲ್ಲಿ ತಲೆಮರಿಸಿಕೊಂಡಿದ್ದ ಆರೋಪಿ ಪ್ರಕಾಶನನ್ನ ಪೊಲೀಸರು ಬಂಧಿಸಿದ್ದಾರೆ. 

37 mins ago

ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಗುಜರಾತ್​​​​ ಟೈಟನ್ಸ್ ಗೆ 35 ರನ್‌ಗಳ ಜಯ

ಅಹ್ಮದಾಬಾದಿನ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹೈವೋಲ್ಟೇಜ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ವಿರುದ್ಧ ಗುಜರಾತ್​​​​ ಟೈಟನ್ಸ್​…

56 mins ago

ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿಯ ಹತ್ಯೆ ಪ್ರಕರಣ: ಆರೋಪಿಯ ಆತ್ಮಹತ್ಯೆ ಮಾಹಿತಿ ಸುಳ್ಳು ಎಂದ ಎಸ್‍ಪಿ

ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿಯ ಹತ್ಯೆ ಪ್ರಕರಣದ ಆರೋಪಿ ಆತ್ಮಹತ್ಯೆ ಮಾಡಿಕೊಂಡ ಮಾಹಿತಿ ಸುಳ್ಳು ಎಂದು ಕೊಡಗು ಎಸ್‍ಪಿ ಕೆ.ರಾಮರಾಜನ್ ತಿಳಿಸಿದ್ದಾರೆ.

1 hour ago

ವಿಶೇಷ ಚೇತನರಿಗೆ ವ್ಯವಸ್ಥೆ ಕಲ್ಪಿಸುವವರಗೆ ನಾನು ಭಾಷಣ ಮಾಡುವುದಿಲ್ಲ: ಪ್ರಧಾನಿ

ತೆಲಂಗಾಣದ ಮಹೆಬೂಬ್ ನಗರದಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು.  ಈ ವೇಳೆ ಸಮಾವೇಶಕ್ಕೆ ಬಂದಿದ್ದ ವಿಶೇಷ…

2 hours ago

ಬರಡು ಭೂಮಿಯಲ್ಲಿ ಬಂಪರ್ ಫಸಲು: ಬರದ ಮಧ್ಯೆ ರೈತರ ಕೈ ಹಿಡಿದ ಮಾವು

ಗಡಿ ಜಿಲ್ಲೆ ಬೀದರ್ ಅಂದರೆ ಸಾಕು ಮೊದಲಿಗೆ ನೆನಪಿಗೆ ಬರೋದು ಬರ. ಸದಾ ಸಂಕಷ್ಟದಲ್ಲಿ ಬದುಕು ಸಾಗಿಸುವ ಇಲ್ಲಿನ ರೈತರ…

2 hours ago