ಹೈದರಾಬಾದ್: ಬೈಕ್ ಚಕ್ರಕ್ಕೆ ಬುರ್ಖಾ ಸಿಕ್ಕಿಹಾಕಿಕೊಂಡು ಬೈಕ್ನಿಂದ ಬಿದ್ದ ಮಹಿಳೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೋವನ್ನು ಶೇರ್ ಮಾಡಿರುವ ಅನೇಕರು ಮಹಿಳೆಯರು ದ್ವಿಚಕ್ರ ವಾಹನದಲ್ಲಿ ಹೋಗುವಾಗ ಎಚ್ಚರಿಕೆ ವಹಿಸಿ ಇಂತಹ ಅವಘಡಗಳನ್ನು ತಪ್ಪಿಸಲು ಎಚ್ಚರಿಕೆ ನೀಡುತ್ತಿದ್ದಾರೆ.
ಹೈದರಾಬಾದ್ನ ಯಾಚರಂನಲ್ಲಿ 18 ವರ್ಷದ ಯುವತಿ ಮತ್ತು ಆಕೆಯ ಸಹೋದರ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ವೀಡಿಯೋದಲ್ಲಿರುವ ಬಾಲಕಿಗೆ ಗಂಭೀರ ಗಾಯಗಳಾಗಿದ್ದು, ಮರುದಿನ ಸಾವು ಸಂಭವಿಸಿದೆ. ಅಪಘಾತದಲ್ಲಿ ಸಹೋದರ ಯಾವುದೇ ಗಾಯಗಳಿಲ್ಲದೆ ಬದುಕುಳಿದಿದ್ದಾರೆ.
ಇಂತಹ ದುರಂತದ ಬಗ್ಗೆ ಎಚ್ಚರಿಕೆ ನೀಡಿರುವ ಟಿಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿಸಿ ಸಜ್ಜನರ್, “ಮಹಿಳೆಯರೇ ಮತ್ತು ಯುವತಿಯರೇ ನೀವು ಬೈಕ್ನಲ್ಲಿ ಕುಳಿತುಕೊಳ್ಳುವಾಗ ಜಾಗರೂಕರಾಗಿರಿ” ಎಂದು ಟ್ವೀಟ್ ಮಾಡಿದ್ದಾರೆ.
ಈ ಘಟನೆಯು ಆನ್ಲೈನ್ನಲ್ಲಿ ಜಾಗೃತಿ ವೀಡಿಯೊಗಳನ್ನು ಹಂಚಿಕೊಳ್ಳುವುದರೊಂದಿಗೆ ರಸ್ತೆ ಸುರಕ್ಷತೆಯ ಕುರಿತು ಸಂಭಾಷಣೆಗಳನ್ನು ಹುಟ್ಟುಹಾಕಿತು.