ಹೈದರಾಬಾದ್ : ಕರೋನದಿಂದ ತನ್ನ ಕುಟುಂಬ ಆರ್ಥಿಕ ಸಂಕಷ್ಟದಿಂದ ಸಿಲುಕಿಕೊಂಡಿದ್ದಕ್ಕೆ ಮನನೊಂದ 32ರ ಹರೆಯದ ಮಹಿಳೆಯೊಬ್ಬರು ತಮ್ಮ ಇಬ್ಬರು ಮಕ್ಕಳ ಜೊತೆಗೆ ನೇಣಿಗೆ ಶರಣಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಸ್ವಾತಿ ಕುಸುಮಾ ಎನ್ನುವವರು ತಮ್ಮ ಮಗ ತನ್ವಿಕ್ (5) ಮತ್ತು ಪುತ್ರಿ ಶ್ರೇಯಾ (3) ಅವರನ್ನು ಕತ್ತು ಹಿಸುಕಿ ಸಾಯಿಸಿ, ನಂತರ ಮನೆಯಲ್ಲಿದ್ದ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದಂಪತಿಗಳು ಪ್ರೇಮ ವಿವಾಹವಾಗಿದ್ದರು ಎನ್ನಲಾಗಿದ್ದು, ಈ ನಡುವೆ ಆರ್ಥಿಕ ಸ್ಥಿತಿ ಹದಗೆಟ್ಟಾಗ ಮನೆಗೆ ಸಂಸಾರಕ್ಕೆ ಹಣದ ಪರಿಸ್ಥಿತಿ ಇಬ್ಬರಲ್ಲೂ ಜಗಳ ತಂದಿದೆ ಎನ್ನಲಾಗಿದೆ ಶುಕ್ರವಾರ ರಾತ್ರಿ ಸ್ವಾತಿ ಮತ್ತು ಸಾಯಿಕುಮಾರ್ ನಡುವೆ ಜಗಳವಾಗಿದ್ದು, ನಂತರ ಸಾಯಿಕುಮಾರ್ ಕೋಪದಿಂದ ಮನೆಯಿಂದ ಹೊರಟು ಹೋಗಿದ್ದಾರೆ. ಶನಿವಾರ ಸಂಜೆ ಮನೆಗೆ ಹಿಂತಿರುಗಿ ನೋಡಿದಾಗ ಇಬ್ಬರು ಮಕ್ಕಳು ಮಲಗುವ ಕೋಣೆಯಲ್ಲಿ ಶವವಾಗಿ ಬಿದ್ದಿದ್ದು, ಪತ್ನಿ ಸೀಲಿಂಗ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಕೂಡಲೇ ಸಾಯಿಕುಮಾರ್ ಸಹಾಯಕ್ಕಾಗಿ ಅಕ್ಕಪಕ್ಕದ ಮನೆಗೆ ಓಡಿದ್ದಾರೆ, ಇದೇ ವೇಳೆ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡು ಸ್ಥಳಕ್ಕೆ ಆಗಮಿಸಿ, ತನಿಖೆ ನಡೆಸುತ್ತಿದ್ದಾರೆ.