ಹೈದರಾಬಾದ್(ತೆಲಂಗಾಣ): ಅಪ್ರಾಪ್ತೆ ಸಹೋದರಿ ಮೇಲೆ ಕಾಮುಕ ಅಣ್ಣನೇ ಅತ್ಯಾಚಾರವೆಸಗಿರುವ ಪ್ರಕರಣ ತೆಲಂಗಾಣದ ಬಾಚುಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಪ್ರಾಪ್ತೆ ಗರ್ಭಿಣಿಯಾಗಿದ್ದಾಳೆಂದು ತಿಳಿದು ಬಂದಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಬಾಚುಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಂಪತಿ ವಾಸವಾಗಿದ್ದು, ಇವರಿಗೆ 17 ವರ್ಷದ ಮಗ ಹಾಗೂ 13 ವರ್ಷದ ಮಗಳಿದ್ದಾಳೆ. ಕಳೆದ ಒಂದು ವರ್ಷದಿಂದ ಸಹೋದರಿ ಮೇಲೆ ಕಾಮುಕ ಅಣ್ಣ ಅತ್ಯಾಚಾರವೆಸಗಿದ್ದಾನೆ.ಜೊತೆಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾರೆ. ಇದರಿಂದ ಆಕೆ ಸುಮ್ಮನಾಗಿದ್ದಾಳೆ.
ಕಳೆದ ಮೂರು ತಿಂಗಳಿಂದ ಬಾಲಕಿಗೆ ಮುಟ್ಟಾಗುವ ಚಕ್ರ ಆಗದ ಕಾರಣ ಸ್ತ್ರೀರೋಗ ತಜ್ಞರ ಬಳಿ ಕರೆದದೊಯ್ದಿದ್ದಾರೆ. ಆಕೆಯನ್ನ ಪರೀಕ್ಷೆಗೊಳಪಡಿಸಿದಾಗ, ನಾಲ್ಕು ತಿಂಗಳ ಗರ್ಭಿಣಿ ಎಂಬ ಮಾಹಿತಿ ತಿಳಿದು ಬಂದಿದೆ. ಇದನ್ನ ಕೇಳಿರುವ ತಾಯಿ ಆಘಾತಕ್ಕೊಳಗಾಗಿದ್ದಾಳೆ. ಘಟನೆ ಬಗ್ಗೆ ಬಾಲಕಿ ಬಳಿ ಕೇಳಿದಾಗ, ಕಳೆದ ಒಂದು ವರ್ಷದಿಂದ ಸಹೋದರ ತನ್ನ ಮೇಲೆ ಅತ್ಯಾಚಾರವೆಸಗಿದ್ದಾಗಿ ಹೇಳಿದ್ದಾಳೆ.
ಈ ವೇಳೆ ಆಕೆಗೆ, ಗರ್ಭಪಾತ ಮಾಡುವಂತೆ ವೈದ್ಯರ ಬಳಿ ತಾಯಿ ಮನವಿ ಸಹ ಮಾಡಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ವೈದ್ಯರು ಮಕ್ಕಳ ರಕ್ಷಣಾ ವಿಭಾಗಕ್ಕೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಮೇ. 17ರಂದು ಬಾಚುಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿಕೊಂಡಿದ್ದು, ವಿಚಾರಣೆ ಆರಂಭಿಸಿದ್ದಾರೆ.