ತಿರುಚ್ಚಿ: ಈಗ ಎಲ್ಲ ಕಡೆ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಅದೇ ರೀತಿ ಯುವಕನೊಬ್ಬ ಹೈವೆಯಲ್ಲಿ ಪಟಾಕಿ ಸಿಡಿಸಿ, ಅಪಾಯಕಾರಿಯಾಗಿ ವೀಲಿಂಗ್ ಸ್ಟಂಟ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ತಮಿಳುನಾಡಿನ ತಿರುಚ್ಚಿ ಜೆಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಟ್ರಾಫಿಕ್ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಬೈಕ್ ಸವಾರನ ಪತ್ತೆಗಾಗಿ ಹುಡುಕಾಟ ನಡೆದಿದೆ. ಬೈಕ್ ಮುಂಭಾಗ ಹೆಡ್ ಲೈಟ್ ನಂಬರ್ ಪ್ಲೇಟ್ ಮಧ್ಯೆ ಪಟಾಕಿ ಇಡುತ್ತಾನೆ ಬಳಿಕ ಪಟಾಕಿ ಸಿಡಿಸುತ್ತಾ ಅಪಾಯಕಾರಿ ಸ್ಟಂಟ್ ಮಾಡುವ ದೃಶ್ಯ ವೈರಲ್ ಆಗಿದೆ.
எவனோ ஒருத்தன் ஆரம்பிச்சி வச்சான், இப்ப நிறைய பேரு இதே மாதிரி பைக்ல வெடி கட்டி வீடியோ போட ஆரம்பிச்சிட்டானுக. pic.twitter.com/cpofhXjV6W
— 𝗟 𝗼 𝗹 𝗹 𝘂 𝗯 𝗲 𝗲 (@Lollubee) November 12, 2023