News Karnataka Kannada
Tuesday, April 30 2024
ತಮಿಳುನಾಡು

ಚಹಾ ಮಾರುವ ಹೋಟೆಲ್‌ ಮಾಡಿದ್ರು ಸೂಪರ್‌ ಸ್ಟಾರ್‌ ರಜನಿ!

Rajinikanth resemblance makes Kochi tea shop owner a 'celebrity'
Photo Credit : IANS

ಕೊಚ್ಚಿ: ಸೂಪರ್‌ ಸ್ಟಾರ್‌ ರಜನಿ ಅವರಿಗೆ ದೇಶ ವಿದೇಶಗಳಲ್ಲಿ ಫ್ಯಾನ್‌ ಫಾಲೋವರ್ಸ್‌ ಇದ್ದಾರೆ. ಆದರೆ ಇದೀಗ ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರು ಚಹಾ ಮಾರುವ ಹೊಟೇಲ್‌ ವೊಂದರ ಮಾಲೀಕರಾಗಿದ್ದಾರೆ. ಈ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ.

ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರು ಚಹಾ ಮಾರುತ್ತಿದ್ದಾರ ಎಂದು ಅಂದುಕೊಳ್ಳಬೇಡಿ. ನಾವು ಹೇಳ್ತಾ ಇರೋದು ಥೇಟ್‌ ರಜಿನಿಕಾಂತ್‌ ರಂತೆಯೇ ಇರುವ ವ್ಯಕ್ತಿಯೊಬ್ಬರ ಬಗ್ಗೆ.

ರಜಿನಿಕಾಂತ್‌ ರಂತೆಯೇ ಇದ್ದಾರೆ ಸುಧಾಕರ್:‌ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ರಜಿನಿಕಾಂತ್‌ ರಂತೆ ಇರುವ ವ್ಯಕ್ತಿಯ ವಿಡಿಯೋವೊಂದು ವೈರಲ್‌ ಆಗಿತ್ತು. ಎಲ್ಲಿಯವರೆಗೆ ಅಂದರೆ ಅನೇಕರು ಇದು ರಜಿನಿಕಾಂತ್ ಅವರ ಚಿತ್ರೀಕರಣದ ವೇಳೆಗಿನ ವಿಡಿಯೋ ಎಂದುಕೊಂಡಿದ್ದರು. ಮುಖ, ಕೂದಲು, ನೋಟ, ಹಾವಭಾವ ಎಲ್ಲವೂ ರಜಿನಿಕಾಂತ್ ರಂತೆಯೇ ಇತ್ತು. ಹಾಗಾಗಿ ಇದು ರಜಿನಿಕಾಂತ್‌ ಎಂದೇ ಜನ ಭಾವಿಸಿದ್ದರು. ವಿಡಿಯೋ ವೈರಲ್‌ ಆದ ಬಳಿಕ ಇದು ಕೇರಳದ ಕೊಚ್ಚಿನ್‌ನಲ್ಲಿರುವ ವೆಂಕಟೇಶ್ವರ ಹೋಟೆಲ್‌ ಮಾಲೀಕ ಸುಧಾಕರ್‌ ಪ್ರಭು ಎಂದು ಗೊತ್ತಾಗಿದೆ.

ಈ ವಿಡಿಯೋವನ್ನು ಮಾಲಿವುಡ್‌ ನಿರ್ದೇಶಕ ನಾದಿರ್ಶಾ ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಬಳಿಕ ವಿಡಿಯೋ ವೈರಲ್‌ ಆಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು