ರಾವಣನಿಗೆ ಗೋಮಾಂಸ ನೀಡುವ ಸೀತೆ: ವಿವಾದದ ಕಿಡಿ ಹೊತ್ತಿಸಿದ ಮತ್ತೊಂದು ವಿವಿ

ಚೆನ್ನೈ: ಕೆಲ ದಿನಗಳ ಹಿಂದೆ ವಿಶ್ವವಿದ್ಯಾಲಯವೊಂದು ಸೀತಾದೇವಿ ಸಿಗರೇಟ್‌ ಸೇದುತ್ತಿರುವ ನಾಟಕವನ್ನು ಪ್ರದರ್ಶನ ಮಾಡಿತ್ತು. ಈಗ ಪುದುಚೇರಿ ವಿವಿಯ ಪ್ರದರ್ಶನ ಕಲಾ ವಿಭಾಗದ ವಿದ್ಯಾರ್ಥಿಗಳು ರಾಮಾಯಣ, ಸೀತಾಮಾತೆ, ಹನುಮಾನ್‌ ಸೇರಿದಂತೆ ಹಿಂದೂ ದೇವತೆಗಳನ್ನು ಅವಮಾನಿಸುವಂಥ ನಾಟಕವನ್ನು ಪ್ರದರ್ಶನ ಮಾಡಿದ್ದಾರೆ.

ತನ್ನ ವಾರ್ಷಿಕ ಸಾಂಸ್ಕೃತಿಕ ಉತ್ಸವ ಎಜಿನಿ 2K24 ಸಂದರ್ಭದಲ್ಲಿ ರಾಮಾಯಣ ಕುರಿತಾದ ನಾಟವನ್ನು ಪ್ರದರ್ಶನ ಮಾಡಿತ್ತು. ಇದರಲ್ಲಿ ಹಿಂದು ದೇವರನ್ನು ಮನಸ್ಸಿಗೆ ಬಂದಂತೆ ಅವಮಾನಿಸಲಾಗಿದೆ. ಇದರ ಬೆನ್ನಲ್ಲಿಯೇ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ಶನಿವಾರ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದು, ವಿದ್ಯಾರ್ಥಿ ಸಂಘಟನೆ ಈ ಕುರಿತಾಗಿ ಪ್ರಕಟಣೆಯನ್ನೂ ನೀಡಿದೆ.

ಈ ನಾಟಕದಲ್ಲಿ ಸೀತಾ ಮಾತೆ ರಾವಣನಿಗೆ ದನದ ಮಾಂಸವನ್ನು ನೀಡುವಂತೆ ಚಿತ್ರಿಸಲಾಗಿದೆ. ಅದರೊಂದಿಗೆ ಭಗವಾನ್‌ ಹನುಮಂತನ ಚಾರಿತ್ರ್ಯ ವಧೆ ಮಾಡಲಾಗಿದೆ. ಇದೇ ನಾಟಕದಲ್ಲಿ ಸೀತಾ ಮಾತೆ ರಾವಣ ಅಪಹರಣ ಮಾಡುವಾಗ ಯಾವುದೇ ರೀತಿಯಲ್ಲೂ ವಿರೋಧ ವ್ಯಕ್ತಪಡಿಸಿಲ್ಲ ಎನ್ನುವಂತೆ ತೋರಿಸಲಾಗಿದೆ. ಅದಲ್ಲದೆ, ರಾವಣನ ಜೊತೆ ಡಾನ್ಸ್‌ ಮಾಡುವಂತೆ ಚಿತ್ರಿಸಲಾಗಿದೆ’ ಎಂದು ಎಕ್ಸ್‌ನಲ್ಲಿ ತಮಿಳುನಾಡು ಎಬಿವಿಪಿ ಪೋಸ್ಟ್‌ ಮಾಡಿದೆ.

ಈ ನಾಟಕ ವಿರುದ್ಧ ವಿವಿ ಆವರಣದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿದೆ. ‘ಎಬಿವಿಪಿ ಪಿಯು ವಿದ್ಯಾರ್ಥಿಗಳು 29 ಮಾರ್ಚ್ರಂದು ಡಿಪಿಎ, ಪಾಂಡಿಚೇರಿ ವಿಶ್ವವಿದ್ಯಾನಿಲಯ ಎಜಿನಿ 2 ಕೆ 24 ಆಯೋಜಿಸಿದ್ದ ಫೆಸ್ಟ್‌ನಲ್ಲಿ ಇತ್ತೀಚೆಗೆ ನಡೆದ ಘಟನೆಯ ವಿರುದ್ಧ ಪ್ರತಿಭಟಿಸಿದರು, ಇದರಲ್ಲಿ ಸೀತಾ ಮಾತೆ ರಾವಣನಿಗೆ ಗೋಮಾಂಸ ನೀಡುವುದನ್ನು ಮತ್ತು ಹನುಮಂತನ ಪಾತ್ರವನ್ನು ವಿರೂಪಗೊಳಿಸುವುದು ಸೇರಿದಂತೆ ರಾಮಾಯಣದ ಅಣಕವಾಡುವ ಅಂಶವಿದೆ’ ಎಂದು ಬರೆದಿದೆ.

ಈ ನಾಟಕದಲ್ಲಿ ಸೀತಾ ಪಾತ್ರದ ಹೆಸರನ್ನು ಗೀತಾ ಎಂದು ಬದಲಿಸಲಾಗಿದೆ. ರಾವಣ ಪಾತ್ರದ ಹೆಸರನ್ನು ಭಾವನಾ ಎಂದು ಮಾಡಲಾಗಿದೆ. ಇದರಲ್ಲಿ ಸೀತೆ, ರಾವಣನಿಗೆ ಗೋಮಾಂಸ ನೀಡುತ್ತಿರುವಂತೆ ಚಿತ್ರಿಸಲಾಗಿದೆ. ಸೀತೆಯ ಅಪರಹಣವಾಗುವ ವೇಳೆ, ‘ನಾನು ಮದುವೆಯಾಗಿದ್ದೇನೆ. ಆದರೆ, ಸ್ನೇಹಿತರಾಗಿ ಇರಬಹುದು’ ಎನ್ನುವ ಮಾತನ್ನು ಹೇಳಿಸಲಾಗಿದೆ.

ಪುದುಚೇರಿ ವಿವಿಯಲ್ಲಿರುವ ಕಮ್ಯುನಿಸ್ಟ್‌ ಹಾಗೂ ಎಡಪಂಥೀಯ ವಿಚಾರಧಾರೆಯ ವಿದ್ಯಾರ್ಥಿಗಳು ಮಾಡಿರುವ ಹುನ್ನಾರ ಎಂದು ಎಬಿವಿಪಿ ಹೇಳಿದೆ.

Ashika S

Recent Posts

ಮುದ್ದಾದ ಮಗುವಿನ ತಾಯಿಯಾದ ಯಾಮಿ ಗೌತಮ್; ಕಂದನಿಗೆ ಇಟ್ಟ ಹೆಸರೇನು ಗೊತ್ತಾ?

ಸ್ಯಾಂಡಲ್​ವುಡ್​ ನಟ ಗಣೇಶ್​​ ಅಭಿನಯದ ಉಲ್ಲಾಸ ಉತ್ಸಾಹ ನಟಿ ಯಾಮಿ ಗೌತಮ್​​ ಅವರು ಮೇ 10 ರಂದು ಗಂಡು ಮಗುವಿಗೆ…

11 mins ago

ಇರಾನ್​​ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊಹಮ್ಮದ್ ಮೊಖ್ಬರ್

ಇರಾನ್ ಅಧ್ಯಕ್ಷ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ಭಾನುವಾರ ಪತನಗೊಂಡಿದ್ದು, ಇಬ್ರಾಹಿಂ ರೈಸಿ ಸಜೀವದಹನವಾಗಿದ್ದಾರೆ. ಹೀಗಾಗಿ ಇದೀಗ ಇಬ್ರಾಹಿಂ ರೈಸಿ ಸಾವಿನ ನಂತರ…

1 hour ago

ವಾಯುಭಾರ ಕುಸಿತ: ದ.ಕನ್ನಡಕ್ಕೆ ಎರಡು ದಿನ ಆರೆಂಜ್ ಅಲರ್ಟ್ ಘೋಷಣೆ

ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಸಮುದ್ರ ತೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸಮುದ್ರಕ್ಕಿಳಿಯದಂತೆ ಮಂಗಳೂರಿನ ಮೀನುಗಾರರಿಗೆ…

1 hour ago

ಸುರಿಯುವ ಮಳೆಯಲ್ಲೇ ದೈವ ನರ್ತನ; ಗಮನ ಸೆಳೆದ ರವಿ ಪಡ್ಡಮ್ ಅವರ ಗಗ್ಗರಸೇವೆ

ಸುರಿಯುವ ಮಳೆಯನ್ನು ಲೆಕ್ಕಿಸದೆ ದೈವಾರಾಧನೆಯ ಶ್ರದ್ಧೆ ವ್ಯಕ್ತಪಡಿಸಿರುವ ವಿಡಿಯೋ ಒಂದು ಸದ್ಯ ವೈರಲ್ ಆಗುತ್ತಿದೆ. ಉಡುಪಿ ಜಿಲ್ಲೆಯ ಅಲೆವೂರಿನಲ್ಲಿ ಬಬ್ಬು…

1 hour ago

ಹೆಸ್ಕಾಂ ಲೈನ್ ಮೆನ್ ಕಾಂಟ್ರ್ಯಾಕ್ಟರ್‌ ನಿರ್ಲಕ್ಷ್ಯಕ್ಕೆ ಯುವಕ ಬಲಿ

ಏಕಾಏಕಿ ವಿದ್ಯುತ್ ಪ್ರವೇಶಿಸಿದ ಪರಿಣಾಮ ಹಾಗೂ ಹೆಸ್ಕಾಂ ಲೈನ್ ಮೆನ್ , ಕಾಂಟ್ರ್ಯಾಕ್ಟರ್‌ ನಿರ್ಲಕ್ಷ್ಯದಿಂದ ಯುವಕನೋರ್ವ ಸಾವನ್ನಪ್ಪಿದ ಘಟನೆ ಧಾರವಾಡ…

1 hour ago

ಪ್ರೀತಿಸಿದ ಹುಡುಗಿ ಆತ್ಮಹತ್ಯೆಗೈದ ಬೆನ್ನಲ್ಲೇ ಹುಡುಗನೂ ಆತ್ಮಹತ್ಯೆ

ಪ್ರೀತಿಸಿದ ಹುಡುಗಿ ಆತ್ಮಹತ್ಯೆಗೈದ ಬೆನ್ನಲ್ಲೇ ಹುಡುಗನೂ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಅತಿಕಾರಿಬೆಟ್ಟು ನಿವಾಸಿ 20 ವರ್ಷದ ಕಾರ್ತಿಕ್ ಪೂಜಾರಿ…

2 hours ago