News Karnataka Kannada
Monday, April 22 2024
Cricket
ತಮಿಳುನಾಡು

ರಾವಣನಿಗೆ ಗೋಮಾಂಸ ನೀಡುವ ಸೀತೆ: ವಿವಾದದ ಕಿಡಿ ಹೊತ್ತಿಸಿದ ಮತ್ತೊಂದು ವಿವಿ

ಕೆಲ ದಿನಗಳ ಹಿಂದೆ ವಿಶ್ವವಿದ್ಯಾಲಯವೊಂದು ಸೀತಾದೇವಿ ಸಿಗರೇಟ್‌ ಸೇದುತ್ತಿರುವ ನಾಟಕವನ್ನು ಪ್ರದರ್ಶನ ಮಾಡಿತ್ತು. ಈಗ ಪುದುಚೇರಿ ವಿವಿಯ ಪ್ರದರ್ಶನ ಕಲಾ ವಿಭಾಗದ ವಿದ್ಯಾರ್ಥಿಗಳು ರಾಮಾಯಣ, ಸೀತಾಮಾತೆ, ಹನುಮಾನ್‌ ಸೇರಿದಂತೆ ಹಿಂದೂ ದೇವತೆಗಳನ್ನು ಅವಮಾನಿಸುವಂಥ ನಾಟಕವನ್ನು ಪ್ರದರ್ಶನ ಮಾಡಿದ್ದಾರೆ.
Photo Credit : NewsKarnataka

ಚೆನ್ನೈ: ಕೆಲ ದಿನಗಳ ಹಿಂದೆ ವಿಶ್ವವಿದ್ಯಾಲಯವೊಂದು ಸೀತಾದೇವಿ ಸಿಗರೇಟ್‌ ಸೇದುತ್ತಿರುವ ನಾಟಕವನ್ನು ಪ್ರದರ್ಶನ ಮಾಡಿತ್ತು. ಈಗ ಪುದುಚೇರಿ ವಿವಿಯ ಪ್ರದರ್ಶನ ಕಲಾ ವಿಭಾಗದ ವಿದ್ಯಾರ್ಥಿಗಳು ರಾಮಾಯಣ, ಸೀತಾಮಾತೆ, ಹನುಮಾನ್‌ ಸೇರಿದಂತೆ ಹಿಂದೂ ದೇವತೆಗಳನ್ನು ಅವಮಾನಿಸುವಂಥ ನಾಟಕವನ್ನು ಪ್ರದರ್ಶನ ಮಾಡಿದ್ದಾರೆ.

ತನ್ನ ವಾರ್ಷಿಕ ಸಾಂಸ್ಕೃತಿಕ ಉತ್ಸವ ಎಜಿನಿ 2K24 ಸಂದರ್ಭದಲ್ಲಿ ರಾಮಾಯಣ ಕುರಿತಾದ ನಾಟವನ್ನು ಪ್ರದರ್ಶನ ಮಾಡಿತ್ತು. ಇದರಲ್ಲಿ ಹಿಂದು ದೇವರನ್ನು ಮನಸ್ಸಿಗೆ ಬಂದಂತೆ ಅವಮಾನಿಸಲಾಗಿದೆ. ಇದರ ಬೆನ್ನಲ್ಲಿಯೇ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ಶನಿವಾರ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದು, ವಿದ್ಯಾರ್ಥಿ ಸಂಘಟನೆ ಈ ಕುರಿತಾಗಿ ಪ್ರಕಟಣೆಯನ್ನೂ ನೀಡಿದೆ.

ಈ ನಾಟಕದಲ್ಲಿ ಸೀತಾ ಮಾತೆ ರಾವಣನಿಗೆ ದನದ ಮಾಂಸವನ್ನು ನೀಡುವಂತೆ ಚಿತ್ರಿಸಲಾಗಿದೆ. ಅದರೊಂದಿಗೆ ಭಗವಾನ್‌ ಹನುಮಂತನ ಚಾರಿತ್ರ್ಯ ವಧೆ ಮಾಡಲಾಗಿದೆ. ಇದೇ ನಾಟಕದಲ್ಲಿ ಸೀತಾ ಮಾತೆ ರಾವಣ ಅಪಹರಣ ಮಾಡುವಾಗ ಯಾವುದೇ ರೀತಿಯಲ್ಲೂ ವಿರೋಧ ವ್ಯಕ್ತಪಡಿಸಿಲ್ಲ ಎನ್ನುವಂತೆ ತೋರಿಸಲಾಗಿದೆ. ಅದಲ್ಲದೆ, ರಾವಣನ ಜೊತೆ ಡಾನ್ಸ್‌ ಮಾಡುವಂತೆ ಚಿತ್ರಿಸಲಾಗಿದೆ’ ಎಂದು ಎಕ್ಸ್‌ನಲ್ಲಿ ತಮಿಳುನಾಡು ಎಬಿವಿಪಿ ಪೋಸ್ಟ್‌ ಮಾಡಿದೆ.

ಈ ನಾಟಕ ವಿರುದ್ಧ ವಿವಿ ಆವರಣದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿದೆ. ‘ಎಬಿವಿಪಿ ಪಿಯು ವಿದ್ಯಾರ್ಥಿಗಳು 29 ಮಾರ್ಚ್ರಂದು ಡಿಪಿಎ, ಪಾಂಡಿಚೇರಿ ವಿಶ್ವವಿದ್ಯಾನಿಲಯ ಎಜಿನಿ 2 ಕೆ 24 ಆಯೋಜಿಸಿದ್ದ ಫೆಸ್ಟ್‌ನಲ್ಲಿ ಇತ್ತೀಚೆಗೆ ನಡೆದ ಘಟನೆಯ ವಿರುದ್ಧ ಪ್ರತಿಭಟಿಸಿದರು, ಇದರಲ್ಲಿ ಸೀತಾ ಮಾತೆ ರಾವಣನಿಗೆ ಗೋಮಾಂಸ ನೀಡುವುದನ್ನು ಮತ್ತು ಹನುಮಂತನ ಪಾತ್ರವನ್ನು ವಿರೂಪಗೊಳಿಸುವುದು ಸೇರಿದಂತೆ ರಾಮಾಯಣದ ಅಣಕವಾಡುವ ಅಂಶವಿದೆ’ ಎಂದು ಬರೆದಿದೆ.

ಈ ನಾಟಕದಲ್ಲಿ ಸೀತಾ ಪಾತ್ರದ ಹೆಸರನ್ನು ಗೀತಾ ಎಂದು ಬದಲಿಸಲಾಗಿದೆ. ರಾವಣ ಪಾತ್ರದ ಹೆಸರನ್ನು ಭಾವನಾ ಎಂದು ಮಾಡಲಾಗಿದೆ. ಇದರಲ್ಲಿ ಸೀತೆ, ರಾವಣನಿಗೆ ಗೋಮಾಂಸ ನೀಡುತ್ತಿರುವಂತೆ ಚಿತ್ರಿಸಲಾಗಿದೆ. ಸೀತೆಯ ಅಪರಹಣವಾಗುವ ವೇಳೆ, ‘ನಾನು ಮದುವೆಯಾಗಿದ್ದೇನೆ. ಆದರೆ, ಸ್ನೇಹಿತರಾಗಿ ಇರಬಹುದು’ ಎನ್ನುವ ಮಾತನ್ನು ಹೇಳಿಸಲಾಗಿದೆ.

ಪುದುಚೇರಿ ವಿವಿಯಲ್ಲಿರುವ ಕಮ್ಯುನಿಸ್ಟ್‌ ಹಾಗೂ ಎಡಪಂಥೀಯ ವಿಚಾರಧಾರೆಯ ವಿದ್ಯಾರ್ಥಿಗಳು ಮಾಡಿರುವ ಹುನ್ನಾರ ಎಂದು ಎಬಿವಿಪಿ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು