News Karnataka Kannada
Monday, April 29 2024
ತಮಿಳುನಾಡು

ಚೀನಿ ಭಾಷೆಯಲ್ಲಿ ಸಿಎಂ ಸ್ಟಾಲಿನ್ ಗೆ ಬರ್ತ್‌ಡೇ ವಿಶ್ ಮಾಡಿ ತಿರುಗೇಟು ಕೊಟ್ಟ ಬಿಜೆಪಿ

ಇತ್ತೀಚೆಗೆ ಇಸ್ರೋ ಉಪಗ್ರಹ ಉಡಾವಣೆ ಕೇಂದ್ರದ ಶಿಲಾನ್ಯಾಸ ಕಾರ್ಯಕ್ರಮದ ಜಾಹೀರಾತು ನೀಡುವ ವೇಳೆ ಇಸ್ರೋ ರಾಕೆಟ್ ಮೇಲೆ ಚೀನಾ ಧ್ವಜವಿರುವಂತಹ ಜಾಹೀರಾತು ನೀಡಿ ಎಡವಟ್ಟು ಮಾಡಿದ ತಮಿಳುನಾಡು ಸರ್ಕಾರಕ್ಕೆ ಅಲ್ಲಿನ ಬಿಜೆಪಿ ಅವರದೇ ರೀತಿಯಲ್ಲಿ ತಿರುಗೇಟು ನೀಡಿದೆ. ಇಂದು ತಮಿಳುನಾಡು ಸಿಎಂ ಎಂ. ಕೆ. ಸ್ಟಾಲಿನ್ ಹುಟ್ಟುಹಬ್ಬ, ಈ ಹಿನ್ನೆಲೆಯಲ್ಲಿ ಡಿಎಂಕೆ ಹಿರಿಯ ನಾಯಕನಿಗೆ ಬಿಜೆಪಿ ಮಂದಾರಿಯನ್ ಅಂದರೆ ಚೀನಾ ಭಾಷೆಯಲ್ಲಿ ವಿಶ್ ಮಾಡುವ ಮೂಲಕ ಕಾಲೆಳೆದಿದೆ.
Photo Credit : News Kannada

ಚೆನ್ನೈ: ಇತ್ತೀಚೆಗೆ ಇಸ್ರೋ ಉಪಗ್ರಹ ಉಡಾವಣೆ ಕೇಂದ್ರದ ಶಿಲಾನ್ಯಾಸ ಕಾರ್ಯಕ್ರಮದ ಜಾಹೀರಾತು ನೀಡುವ ವೇಳೆ ಇಸ್ರೋ ರಾಕೆಟ್ ಮೇಲೆ ಚೀನಾ ಧ್ವಜವಿರುವಂತಹ ಜಾಹೀರಾತು ನೀಡಿ ಎಡವಟ್ಟು ಮಾಡಿದ ತಮಿಳುನಾಡು ಸರ್ಕಾರಕ್ಕೆ ಅಲ್ಲಿನ ಬಿಜೆಪಿ ಅವರದೇ ರೀತಿಯಲ್ಲಿ ತಿರುಗೇಟು ನೀಡಿದೆ. ಇಂದು ತಮಿಳುನಾಡು ಸಿಎಂ ಎಂ. ಕೆ. ಸ್ಟಾಲಿನ್ ಹುಟ್ಟುಹಬ್ಬ, ಈ ಹಿನ್ನೆಲೆಯಲ್ಲಿ ಡಿಎಂಕೆ ಹಿರಿಯ ನಾಯಕನಿಗೆ ಬಿಜೆಪಿ ಮಂದಾರಿಯನ್ ಅಂದರೆ ಚೀನಾ ಭಾಷೆಯಲ್ಲಿ ವಿಶ್ ಮಾಡುವ ಮೂಲಕ ಕಾಲೆಳೆದಿದೆ.

ಹೌದು. . ತ.ನಾಡು ಬಿಜೆಪಿ ಪರವಾಗಿ ತಮಿಳುನಾಡಿನ ಗೌರವನ್ವಿತ ಸಿಎಂ ತಿರು ಎಂ.ಕೆ. ಸ್ಟಾಲಿನ್ ಅವರಿಗೆ ಅವರ ಇಷ್ಟದ ಭಾಷೆಯಲ್ಲಿ ಹುಟ್ಟುಹಬ್ಬದ ಶುಭಾಶಯಗಳು ಅವರಿಗೆ ದೀರ್ಘ ಆಯುಷ್ಯ ಆರೋಗ್ಯದಿಂದ ಬಾಳಲಿ ಎಂದು ಬರೆದು ವಿಶ್ ಮಾಡಿರುವ ತಮಿಳುನಾಡು ಬಿಜೆಪಿಯ ಟ್ವಿಟ್ಟರ್ ಪೇಜ್, ಕೆಳಗೆ ಸ್ಟಾಲಿನ್ ಫೋಟೋವನ್ನು ಹಾಕಿದ್ದಾರೆ.

ಅದರಲ್ಲಿ ಚೀನಾದ ಮಂದಾರಿಯನ್ ಭಾಷೆಯಲ್ಲಿ ಸಿಎಂ ಸ್ಟಾಲಿನ್ ಅವರಿಗೆ ವಿಶ್ ಮಾಡಲಾಗಿದೆ. ವೈರಲ್ ಆದ ಸ್ವಲ್ಪ ಹೊತ್ತಿನಲ್ಲೇ ಈ ಪೋಸ್ಟನ್ನು 7 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇದರ ಜೊತೆ ಕೆಳಭಾಗದಲ್ಲಿ ಯಾರು ತಮಿಳುನಾಡು ಸಿಎಂ ಅವರಿಗೆ ಮಂದರಿಯನ್‌ ಭಾಷೆಯಲ್ಲಿ ವಿಶ್ ಮಾಡಲು ಬಯಸುವಿರೋ ಅವರೆಲ್ಲಾ ಸಿಎಂ ಅವರಿಗೆ ಈ ಕೆಳಗೆ ಇರುವ ಮಂದರಿಯನ್ ಭಾಷೆಯ ಶುಭಾಶಯವನ್ನು ಬಳಸಿಕೊಳ್ಳಿ ಎಂದು ಪೋಸ್ಟ್ ಮಾಡಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು