ಚೆನ್ನೈ,ನ.8: ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯ ದಿಂಡುಗಲ್ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಪತ್ನಿ ಸದಾ ಮೊಬೈಲ್ನಲ್ಲೇ ಕಾಲ ಕಳೆಯುತ್ತಾಳೆಂದು ಪತಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಮೃತ ಮಹಿಳೆಯನ್ನು ಚಿತ್ರಾ ಎಂದು ಗುರುತಿಸಲಾಗಿದೆ. ಈಕೆಯ ಪತಿ ಅಮೃತಲಿಂಗಂನನ್ನು ಪೊಲೀಸರು ಬಂಧಿಸಿದ್ದಾರೆ.
ರಾತ್ರಿಯಾದರೂ ಮೊಬೈಲ್ನಲ್ಲಿ ಸಾಮಾಜಿಕ ತಾಣ ನೋಡುವಾಗ ಪತ್ನಿಗೆ ಮೊದಲು ಬುದ್ದಿ ಹೇಳಿದ್ದಾನೆ ಆಕೆ ಕೇಳದಿದ್ದಾಗ ಕೋಪಗೊಂಡ ಪತಿ ಶಾಲಿನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಂದಿದ್ದಾನೆ.
ಪತ್ನಿ ಚಿತ್ರಾ , ಟಿಕ್ಟಾಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಚಾಟ್ ವಿಡಿಯೋ ಮಾಡುತ್ತಿದ್ದರು. ಇಡೀ ದಿನ ಮೊಬೈಲ್ನಲ್ಲಿ ಕಾಲ ಕಳೆಯುತ್ತಿದ್ದಿದಕ್ಕೆ ಪತಿ – ಪತ್ನಿ ನಡುವೆ ಜಗಳವಾಗುತ್ತಿತ್ತು.