ಸೇನಾಪಡೆಗಳ ಮುಖ್ಯಸ್ಥ ರಾವತ್ ನಿಧನಕ್ಕೆ ಟ್ವೀಟ್‌ ಮೂಲಕ ಸಿಎಂ ಬೊಮ್ಮಾಯಿ ಸಂತಾಪ

ವೆಲ್ಲಿಂಗ್ಟನ್(ಡಿ.08) : ತಮಿಳುನಾಡಿನ ಕುನ್ನೂರು ಅರಣ್ಯ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಬುಧವಾರ ಪತನಗೊಡಿದ್ದು, ಈ ದುರಂತದಲ್ಲಿ ಅವರ ಪತ್ನಿ ಮಧುಲಿಕಾ ರಾವತ್ ಸೇರಿ ಒಟ್ಟು 13 ಮಂದಿ ಸಾವನ್ನಪ್ಪಿರುವ ಮಾಹಿತಿಯನ್ನು ಭಾರತೀಯ ವಾಯುಸೇನಾ ಪಡೆ ದೃಢಪಡಿಸಿದೆ.

ವೆಲ್ಲಿಂಗ್ಟನ್ ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜಿನಲ್ಲಿ ಉಪನ್ಯಾಸ ನೀಡಲು ಬಿಪಿನ್ ರಾವತ್ ತೆರಳುತ್ತಿದ್ದರು. ಆದರೆ ಹೆಲಿಕಾಪ್ಟರ್ ಸೂಲೂರು ವಾಯುನೆಲೆಯಿಂದ ವೆಲ್ಲಿಂಗ್ಟನ್‌ಗೆ ತೆರಳುವಾಗ, ಮಧ್ಯಾಹ್ನ 12.20ಕ್ಕೆ ಪತನಗೊಂಡಿದೆ.

ಈ ಬೆನ್ನಲ್ಲೇ ಕರ್ನಾಟಕ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಟ್ವೀಟ್‌ ಮಾಡಿದ್ದು ಬಿಪಿನ್ ರಾವತ್ ಅವರ ನಿಧನದಿಂದ ನಾನು ದಿಗ್ಭ್ರಾಂತನಾಗಿದ್ದೇನೆ ಎಂದು ಹೇಳಿದ್ದಾರೆ. ” ದೇವರು ಬಿಪಿನ್ ರಾವತ್ ಸೇರಿದಂತೆ ಇತರರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಸಾವಿನ ದುಃಖ ಭರಿಸುವ ಶಕ್ತಿಯನ್ನು ಆ ದೇವರು ಅವರ ಕುಟುಂಬದವರಿಗೆ ನೀಡಲಿ. ಓಂ ಶಾಂತಿಃ ” ಎಂದು ಹೇಳಿದ್ದಾರೆ.

“ದೇಶದ ಸೇನಾಪಡೆಗಳ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ಅವರ ನಿಧನದಿಂದ ನಾನು ದಿಗ್ಭ್ರಾಂತನಾಗಿದ್ದೇನೆ. ನಿಜಕ್ಕೂ ಇದು ದುರದೃಷ್ಟಕರ,‌ ಅವರು ಪ್ರಯಾಣಿಸುತ್ತಿದ್ದ ಹೆಲಿಕ್ಯಾಪ್ಟರ್ ಅಪಘಾತಕ್ಕೆ ಈಡಾಗಿರುವುದು ದುರಂತವೇ ಸರಿ. ಅವರ ಜತೆ ಅವರ ಪತ್ನಿ ಮಧುಲಿಕಾ ರವಾತ್ ಸೇರಿದಂತೆ ಇತರೆ 11 ಜನ ಸಾವನ್ನಪ್ಪಿರುವುದು ಹೃದಯ ಕಲುಕುವ ಸಂಗತಿಯಾಗಿದೆ” ಎಂದು ಬೊಮ್ಮಾಯಿ ಟ್ವೀಟ್‌ ಮಾಡಿದ್ದಾರೆ.

Gayathri SG

Recent Posts

ಪರಶುರಾಮ ಮೂರ್ತಿಯ ಕಾಮಗಾರಿ ನಡೆಸಲು ಕಾಂಗ್ರೆಸ್ ಅಡ್ಡಿ: ನವೀನ್‌  ನಾಯಕ್

ಪರಶುರಾಮ ಮೂರ್ತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಕಾಮಗಾರಿ ನಡೆಸಲು ಹೈಕೋರ್ಟ್ ಅನುಮತಿ ನೀಡಿದ್ದು, ಕಾಮಗಾರಿ ಆರಂಭಕ್ಕೆ ಜಿಲ್ಲಾಡಳಿತ ತಡೆಯೊಡ್ಡುವ ಮೂಲಕ ಪರೋಕ್ಷವಾಗಿ…

13 mins ago

ಬಂಡೀಪುರ ಅರಣ್ಯ ಪ್ರದೇಶದಲ್ಲಿ ಹುಲಿ ಮೃತದೇಹ ಪತ್ತೆ

ಗಂಡು ಹುಲಿಯೊಂದರ ಮೃತದೇಹ  ಬಂಡೀಪುರ ಹುಲಿ ಸಂರಕ್ಷಿತ  ಪ್ರದೇಶದ  ಮೈಸೂರು ಜಿಲ್ಲೆಯ  ಹೆಡಿಯಾಲ ಉಪ-ವಿಭಾಗದ ಹೆಬ್ಬಳ್ಳ ಗಸ್ತಿನ ಚಾಮಲಾಪುರ ಕಟ್ಟೆಯ ಅರಣ್ಯ ಪ್ರದೇಶದಲ್ಲಿ  ಪತ್ತೆಯಾಗಿದ್ದು, ವಯೋಸಹಜವಾಗಿ…

19 mins ago

15 ವರ್ಷದಿಂದ ಸಂಸದ ರಾಘವೇಂದ್ರ ಗೆದ್ದು ಏನು ಕಡೆದು ಕಟ್ಟೆಹಾಕಿದ್ದಾರೆ: ಪ್ರದೀಪ್ ಈಶ್ವರ್

ಕಳೆದ 15 ವರ್ಷದಿಂದ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸಂಸದ ರಾಘವೇಂದ್ರ ಗೆದ್ದು ಏನು ಕಡೆದು ಕಟ್ಟೆಹಾಕಿದ್ದಾರೆ ಎಂದು ಚಿಕ್ಕಬಳ್ಳಾಪುರದ ಶಾಸಕ…

23 mins ago

ವರುಣನ ಆರ್ಭಟಕ್ಕೆ ಬೆಳೆ ನಷ್ಟ : ಬಿರುಗಾಳಿ ಮಳೆಗೆ ನೆಲಕಚ್ಚಿದ 8 ಎಕರೆ ಬಾಳೆ ಬೆಳೆ

ವರುಣ ಕ್ಷೇತ್ರದಲ್ಲಿ ವರುಣನ ಆರ್ಭಟಕ್ಕೆ ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಸುಮಾರು ಎಂಟು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬಾಳೆಗೊನೆ…

35 mins ago

ಯೇನೆಪೋಯ ವಿಶ್ವ ವಿದ್ಯಾನಿಲಯದಲ್ಲಿ ಕೌಶಲ್ಯ ಮೌಲ್ಯಮಾಪನ ಕಾರ್ಯಾಗಾರ

ನರ್ಸಿಂಗ್ ಎಜುಕೇಶನ್ ವಿಭಾಗ, ಯೇನೆಪೋಯ ನರ್ಸಿಂಗ್ ಕಾಲೇಜು, ಹಾಗೂ ಯೇನೆಪೋಯ ವಿಶ್ವ ವಿದ್ಯಾನಿಲಯ, ಮಂಗಳೂರು. ಇದರ ಆಶ್ರಯದಲ್ಲಿ ದಿನಾಂಕ ೦೪.೦೫.೨೦೨೪…

38 mins ago

ಬೀದರ್ ಅಭಿವೃದ್ಧಿಗೆ ಕಾಂಗ್ರೆಸ್ ಗೆಲ್ಲಿಸಿ : ಸಾಗರ್ ಖಂಡ್ರೆ ಮನವಿ

'ಬೀದರ್ ಲೋಕಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ. ಅತ್ಯಂತ ಕಿರಿಯ ವಯಸ್ಸಿನ ಅಭ್ಯರ್ಥಿಯನ್ನು ಸಂಸತ್ತಿಗೆ ಗೆಲ್ಲಿಸಿ…

45 mins ago