ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ರೀತಿಯ ಧನಾತ್ಮಕ ಸುದ್ದಿಯಲ್ಲಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಈಗ ಮತ್ತೊಮ್ಮೆ ತಮಿಳುನಾಡಿನಲ್ಲಿ ಮನೆಮಾತಾಗಿದ್ದಾರೆ.
ಅದೇನೆಂದರೆ, ಸ್ಟಾಲಿನ್ ಚೆನ್ನೈನ ಕನ್ನಗಿ ನಗರ ಬಸ್ ನಿಲ್ದಾಣದಿಂದ ಸಿಟಿ ಬಸ್ ನಲ್ಲಿ ಪ್ರಯಾಣಿಸಿದ್ದಾರೆ. ಆದರೆ ಬಸ್ ನಲ್ಲಿದ್ದ ಜನರಿಗೆ ಸ್ಟಾಲಿನ್ ಎಂಬುದು ತಕ್ಷಣಕ್ಕೆ ಗುರುತಿಸಲು ಅಸಾಧ್ಯವಾಗಿದೆ. ಏಕೆಂದರೆ ಇಂಥ ಫುಲ್ ರಶ್ ಬಸ್ಸಿನಲ್ಲಿ ಮುಖ್ಯಮಂತ್ರಿ ಬರಲು ಸಾಧ್ಯವಿಲ್ಲ ಎಂದುಕೊಂಡಿದ್ದರು.
ಸ್ವಲ್ಪ ಸಮಯದ ನಂತರ ಕೆಲವರಿಗೆ ಅವರು ಸಿಎಂ ಸ್ಟಾಲಿನ್ ಎಂಬುದು ಗೊತ್ತಾಗಿದ್ದು, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾರೆ.
ನಂತರ ಸ್ಟಾಲಿನ್ ಅವರು ಪ್ರಯಾಣಿಕರೊಂದಿಗೆ ಮಾತನಾಡಿ, ಮಹಿಳೆಯರಿಗೆ ತಮ್ಮ ಸರ್ಕಾರ ನೀಡಿರುವ ಉಚಿತ ಬಸ್ ಪ್ರಯಾಣ ಸೌಲಭ್ಯಗಳ ಬಗ್ಗೆ ವಿವರಿಸಿದ್ದಾರೆ. ಇದೀಗ ಈ ವಿಡಿಯೋ ಸಕ್ಕತ್ ವೈರಲ್ ಆಗಿದ್ದು, ಸ್ಟಾಲಿನ್ ಅವರನ್ನು ಹಾಡಿ ಹೊಗಳುತ್ತಿದ್ದಾರೆ.
தி. நகர் – கண்ணகி நகர் வழித்தட பேருந்தில் மாண்புமிகு முதலமைச்சர் @mkstalin அவர்கள் திடீரென ஆய்வு மேற்கொண்டு, பெண்களிடம் மகளிருக்கான இலவச பேருந்து பயண திட்டம் குறித்து கேட்டறிந்தார். pic.twitter.com/QbKwZKpB3i
— CMOTamilNadu (@CMOTamilnadu) October 23, 2021