News Karnataka Kannada
Wednesday, May 01 2024
ತಮಿಳುನಾಡು

ದೇಶದ ಮೊದಲ ಮಹಿಳಾ ಮನೋರೋಗ ಶಾಸ್ತ್ರಜ್ಞೆ ಡಾ. ಮಾಂಬಲಿಕಲಾಕಿಲ್‌ ಶಾರದಾಮೆನೊನ್‌ ನಿಧನ

Latest News
Photo Credit :

ಚೆನ್ನೈ: ದೇಶದ ಮೊದಲ ಮಹಿಳಾ ಮನೋರೋಗ ಶಾಸ್ತ್ರಜ್ಞೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಡಾ. ಮಾಂಬಲಿಕಲಾಕಿಲ್‌ ಶಾರದಾಮೆನೊನ್‌(98)ಸೋಮವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಹಲವು ಸಮಯಗಳಿಂದ ಅವರು ವಯೋಸಹಜವಾದ ಅನಾರೋಗ್ಯದಿಂದ ಬಳಲುತ್ತಿದ್ದರು.

ಚೆನ್ನೈನ ಕಿಲುಪ್ಪಾಕ್‌ ಎಂಬಲ್ಲಿರುವ ಇನ್ಸ್ಟಿಟ್ಯೂಟ್‌ ಆಫ್ ಮೆಂಟಲ್‌ ಹೆಲ್ತ್‌ (ಐಎಂಎಚ್‌)ನ ದೀರ್ಘಾವಧಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಯೂ ಅವರದ್ದು.

ಮಂಗಳೂರಿನಲ್ಲಿ 1923 ಏ.5ರಂದು ಜನಿಸಿದ್ದರು. ನ್ಯಾಯಾಧೀಶರಾಗಿದ್ದ ಅವರ ತಂದೆ ಚೆನ್ನೈಗೆ ವರ್ಗಾವಣೆ ಯಾಗಿದ್ದರಿಂದ ಶಾರದಾ ಕೂಡ ಅಲ್ಲಿಗೆ ತೆರಳಿದ್ದರು. ಮದ್ರಾಸ್‌ ಮೆಡಿಕಲ್‌ ಕಾಲೇಜಿನಲ್ಲಿ 1947ರಲ್ಲಿ ಎಂಬಿಬಿಎಸ್‌ ಪದವಿ ಪೂರ್ತಿಗೊಳಿಸಿದ ಅವರು ಹಲವು ಆಸ್ಪತ್ರೆಗಳಲ್ಲಿ ವೈದ್ಯರಾಗಿದ್ದರು.

ಇದೇ ಅವಧಿಯಲ್ಲಿ ಅವರು ಎಂ.ಡಿ. ಪದವಿಯನ್ನೂ 1953ರಲ್ಲಿ ಪೂರ್ತಿಗೊಳಿಸಿದರು. ನಂತರ ಅವರು ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಮನೋರೋಗದಲ್ಲಿ ಎರಡು ವರ್ಷಗಳ ಪದವಿಯನ್ನೂ ಪೂರ್ತಿಗೊಳಿಸಿ ದೇಶದ ಮೊದಲ ಮಹಿಳಾ ಮನೋರೋಗ ತಜ್ಞೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

1984ರಲ್ಲಿ ಅವರು ಸ್ಕಿಜೋಫ್ರೆàನಿಯಾ ಕೇರ್‌ ಆಯಂಡ್‌ ರಿಸರ್ಚ್‌ ಫೌಂಡೇಷನ್‌ (ಎಸ್‌ಸಿಎಆರ್‌ಎಫ್) ಅನ್ನು ಸ್ಥಾಪಿಸಿದ್ದರು. ಜತೆಗೆ ಚೆನ್ನೈನಲ್ಲಿರುವ ಇನ್ಸ್ಟಿಟ್ಯೂಟ್‌ ಆಫ್ ಮೆಂಟಲ್‌ ಹೆಲ್ತ್‌ನ ಸೂಪರಿಂಟೆಂಡೆಂಟ್‌ ಆಗಿ 18 ವರ್ಷಗಳ ಸೇವೆ ಸಲ್ಲಿಸಿದ್ದರು ಮತ್ತು ಸಂಸ್ಥೆಯ ಆಮೂಲಾಗ್ರ ಬೆಳವಣಿಗೆಗೆ ಕಾರಣರಾಗಿದ್ದರು. ವೈದ್ಯಕೀಯ ಕ್ಷೇತ್ರದಲ್ಲಿನ ಅನುಪಮ ಸೇವೆಗಾಗಿ 1992ರಲ್ಲಿ ಕೇಂದ್ರ ಸರ್ಕಾರ ಅವರಿಗೆ ಪದ್ಮವಿಭೂಷಣ ಗೌರವ ನೀಡಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು