News Karnataka Kannada
Wednesday, May 01 2024
ತಮಿಳುನಾಡು

ಗಂಡನ ಮನೆಯಲ್ಲಿ ಶೌಚಾಲಯವಿಲ್ಲದೆ ಮನನೊಂದು ಪತ್ನಿ ಆತ್ಮಹತ್ಯೆ

Untitled 101
Photo Credit :

ತಮಿಳುನಾಡು: ತನ್ನ ಗಂಡನ ಮನೆಯಲ್ಲಿ ಶೌಚಾಲಯದ ಕೊರತೆಯಿದೆ ಎಂದು ಮನನೊಂದ 27 ವರ್ಷದ ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಕಡಲೂರಿನಲ್ಲಿ ನಡೆದಿದೆ.

ರಮ್ಯಾ ಮೃತ ಮಹಿಳೆ. ಇವರು ಕಡಲೂರು ಜಿಲ್ಲೆಯ ಅರಿಸಿಪೆರಿಯಂಕುಪ್ಪಂ ಗ್ರಾಮದವರಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ರಮ್ಯಾ ಏಪ್ರಿಲ್ 6 ರಂದು ಕಾರ್ತಿಕೇಯನ್ ಅವರನ್ನು ವಿವಾಹವಾಗಿದ್ದರು.

ಮೂಲಗಳ ಪ್ರಕಾರ, ಗಂಡನ ಮನೆಯಲ್ಲಿ ಶೌಚಾಲಯ ಇಲ್ಲದ ಕಾರಣ ರಮ್ಯಾ ಮದುವೆಯ ನಂತರ ತಾಯಿಯೊಂದಿಗೆ ವಾಸಿಸಲು ಆರಂಭಿಸಿದ್ದರು.
ರಾಜ್ಯದ ರಾಜಧಾನಿಯಿಂದ ಸುಮಾರು 4 ಗಂಟೆಗಳ ದೂರದಲ್ಲಿರುವ ಕಡಲೂರು ನಗರದಲ್ಲಿ ಶೌಚಾಲಯವಿರುವ ಮನೆಯನ್ನು ಹುಡುಕುವಂತೆ ರಮ್ಯ ಪತಿ ಕಾರ್ತಿಕೇಯನ್ ಅವರನ್ನು ಕೇಳಿದ್ದಳು ಎನ್ನಲಾಗಿದೆ. ಇದು ಅವರ ನಡುವೆ ಪದೇ ಪದೇ ವಾದಗಳನ್ನು ಉಂಟುಮಾಡಿತು.

ಇದರಿಂದ ನೊಂದ ರಮ್ಯಾ ಸೋಮವಾರ ಅವರ ತಾಯಿ ತಮ್ಮ ಮನೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡಿದ್ದಾರೆ. ಕೂಡಲೇ ಆಕೆಯನ್ನು ಕಡಲೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾದರೂ, ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು