News Karnataka Kannada
Monday, April 29 2024
ತಮಿಳುನಾಡು

ಅಕ್ರಮ ಸಂಬಂಧ: ಪತ್ನಿಯ ಪ್ರಿಯಕರನನ್ನು ಹತ್ಯೆಗೈದ ಪತಿ

ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಕಾರೊಂದು ಕಂದಕಕ್ಕೆ ಬಿದ್ದ ಪರಿಣಾಮ ದಂಪತಿ ಹಾಗೂ ಮಗು ಸಾವನ್ನಪ್ಪಿದ್ದಾರೆ.
Photo Credit :

ಚೆನ್ನೈ : ಪತ್ನಿಯ ಅನೈತಿಕ ಸಂಬಂಧದ ವಿಚಾರ ತಿಳಿದು ಆಕೆಯ ಪ್ರಿಯಕರನನ್ನು ಹತ್ಯೆಗೈದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ತಿರುಪುರ್ ಜಿಲ್ಲೆಯ ವೇಲಂಪಾಳ್ಯಂನಲ್ಲಿ ಆರೋಪಿ 45 ವರ್ಷದ ಶಶಿಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಶಶಿಕುಮಾರ್ ತನ್ನ ಪತ್ನಿ ಪ್ರಿಯಾ ಮತ್ತು ಇಬ್ಬರು ಪುತ್ರಿಯರೊಂದಿಗೆ ತಿರುಪುರ್ ನಗರದಲ್ಲಿ ವಾಸವಾಗಿದ್ದಾನೆ. ಗಂಡ ಮತ್ತು ಹೆಂಡತಿ ಬನಿಯನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಪ್ರಿಯಾ ತನ್ನ ಸಹೋದ್ಯೋಗಿ ತಮಿಳರಸನ್ ಜೊತೆ ಒಂದು ವರ್ಷದಿಂದ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.

ಈ ವಿಚಾರ ತಿಳಿದ ಶಶಿಕುಮಾರ್, ಸಂಬಂಧ ಕಡಿದುಕೊಳ್ಳುವಂತೆ ತಾಕೀತು ಮಾಡಿದ್ದ. ಪ್ರಿಯಾ ಅವರ ಪ್ರಿಯಕರ ತಮಿಳರಸನ್ ತನ್ನ ತಾಯಿ, ಇಬ್ಬರು ಪುತ್ರರು ಮತ್ತು ಕಿರಿಯ ಸಹೋದರನೊಂದಿಗೆ ವೆಲಂಪಾಳ್ಯಂನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅವರ ಪತ್ನಿ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದರು.

ಪ್ರಿಯಾ ಆಗಾಗ್ಗೆ ತಮಿಳರಸನ್ ಮನೆಗೆ ಭೇಟಿ ನೀಡುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಶಿಕುಮಾರ್ ತನ್ನ ಪತ್ನಿಯ ಪ್ರಿಯಕರನನ್ನು ಕೊಲೆ ಮಾಡಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು