News Karnataka Kannada
Sunday, April 28 2024
ರಾಜಸ್ಥಾನ

ಉದ್ಯೋಗಾವಕಾಶದ ಗ್ಯಾರಂಟಿ ನೀಡಿದ ರಾಗಾ; 30 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿ ಭರವಸೆ

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯುವಕರಿಗೆ 30 ಲಕ್ಷ ಸರ್ಕಾರಿ ಉದ್ಯೋಗ ನೀಡುವುದಾಗಿ ರಾಹುಲ್ ಗಾಂಧಿ ಘೋಷಿಸಿದ್ದಾರೆ.
Photo Credit : News Kannada

ಜೈಪುರ: ದೇಶದಲ್ಲಿ ಮತಗಳನ್ನು ಸೆಳೆಯುವಲ್ಲಿ ಗ್ಯಾರೆಂಟಿಗಳು ಯಶಸ್ವಿಯಾಗುತ್ತಿದ್ದು, ಕಾಂಗ್ರೆಸ್ ಭರವಸೆಗಳ ಪಟ್ಟಿಗೆ ಖಚಿತ ಸರ್ಕಾರಿ ಉದ್ಯೋಗಾವಕಾಶ ಸೇರ್ಪಟ್ಟಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯುವಕರಿಗೆ 30 ಲಕ್ಷ ಸರ್ಕಾರಿ ಉದ್ಯೋಗ ನೀಡುವುದಾಗಿ ರಾಹುಲ್ ಗಾಂಧಿ ಘೋಷಿಸಿದ್ದಾರೆ.

ಭಾರತ್ ಜೋಡೋ ನ್ಯಾಯ್ ಯಾತ್ರೆ ಅಂಗವಾಗಿ ರಾಜಸ್ಥಾನದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ವಿವಿಧ ಭರವಸೆ ನೀಡಿದ ಅವರು, ಯುವಕರು, ಬಡವರು ಮತ್ತು ಇತರ ವರ್ಗಗಳಿಗಾಗಿ ಪಕ್ಷದ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

ಪ್ರಸ್ತುತ ಖಾಲಿ ಇರುವ 30 ಲಕ್ಷ ಸರ್ಕಾರಿ ಹುದ್ದೆಗಳನ್ನು ಪ್ರಧಾನಿ ಮೋದಿ ತುಂಬಲಿಲ್ಲ. ನಾವು ಅಧಿಕಾರಕ್ಕೆ ಬಂದರೆ ಮೊದಲು ಮಾಡುವ ಕೆಲಸ ಆ ಹುದ್ದೆಗಳನ್ನು ತುಂಬಿಸುವುದು ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಈ ವೇಳೆ ಪದವೀಧರರು ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಶಿಷ್ಯವೇತ ಘೋಷಿಸುತ್ತಾ, ಇದರ ಅಡಿಯಲ್ಲಿ ಯುವಕರಿಗೆ ಒಂದು ವರ್ಷ ತರಬೇತಿ ನೀಡಲಾಗುವುದು ಹಾಗು ಈ ಸಮಯದಲ್ಲಿ ರೂ.1 ಲಕ್ಷ ಸ್ಟೈಫಂಡ್ ನೀಡಲಾಗುವುದು ಎಂದರು.

ಸಣ್ಣ ಉದ್ಯಮಗಳನ್ನು ಪ್ರಾರಂಭಿಸಲು ಬಯಸುವವರನ್ನು ಬೆಂಬಲಿಸಲು 5000 ಕೋಟಿ ರೂಪಾಯಿಗಳ ಆರಂಭಿಕ ನಿಧಿಯ ರಚನೆ, ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ‘ಯುವ ರೋಶನಿ’ ಅಡಿಯಲ್ಲಿ ಜಿಲ್ಲೆಗಳಲ್ಲಿ ಸ್ಟಾರ್ಟ್‌ಅಪ್‌ ಆರಂಭದ ಭರವಸೆಗಳನ್ನೂ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು