ಆನ್‍ಲೈನ್ ಗೇಮ್ : ಬಾಲಕರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

ಜೈಪುರ: ಆನ್‍ಲೈನ್ ಗೇಮ್‍ಗಳಲ್ಲಿ ರೀಚಾರ್ಜ್ ಟೋಕನ್ ಪಾವತಿ ವಿಚಾರವಾಗಿ ಜಗಳ ನಡೆದು 16 ವರ್ಷದ ಬಾಲಕನೊಬ್ಬ ತನ್ನ 12 ವರ್ಷದ ಸೋದರ ಸಂಬಂಧಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿ, ಹೊಲದಲ್ಲಿ ಹೂತುಹಾಕಿರುವ ಘಟನೆ ರಾಜಸ್ಥಾನದ ನಗೌರ್ ಜಿಲ್ಲೆಯ ಲಾಡ್ನುವಿನಲ್ಲಿ ನಡೆದಿದೆ.ಮಗ ಕಾಣೆಯಾಗಿರುವ ಬಗ್ಗೆ ಗಾಬರಿಗೊಂಡ ಮೃತ ಬಾಲಕನ ತಂದೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ಪ್ರಕರಣದ ತನಿಖೆಗೆ ಮುಂದಾದ ಪೊಲೀಸರು, ಅನುಮಾನಗೊಂಡು ಕೊಲೆ ಮಾಡಿದ ಬಾಲಕನನ್ನು ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ.

ಆನ್‍ಲೈನ್ ಗೇಮಿಂಗ್ ಟೋಕನ್‍ಗಳನ್ನು ಖರೀದಿಸಲು ಆರೋಪಿ ತನ್ನ ಸೋದರಸಂಬಂಗೆ ಹಣವನ್ನು ಸಾಲವಾಗಿ ನೀಡಿದ್ದನು, ಅದನ್ನು ಆತ ಹಿಂದಿರುಗಿಸದ ಕಾರಣ ಇಬ್ಬರಲ್ಲಿ ಜಗಳ ನಡೆದು ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ.

ಅಷ್ಟೇ ಅಲ್ಲದೆ ಈ ಇಬ್ಬರು ಬಾಲಕರೂ ಆನ್‍ಲೈನ್ ಆಟಗಳಿಗೆ ಪಾವತಿ ಟೋಕನ್‍ಗಳನ್ನು ಖರೀದಿಸಲು ಚಿಕ್ಕಪ್ಪ (ಕೊಲೆಯಾದ ಬಾಲಕನ ತಂದೆ)ನಿಂದ 5 ಲಕ್ಷ ರೂ. ಸುಲಿಗೆ ಮಾಡಲು ಯೋಜನೆ ರೂಪಿಸಿದ್ದಾಗಿಯೂ ಆರೋಪಿ ತಿಳಿಸಿದ್ದಾನೆ.

Swathi MG

Recent Posts

ರೈತನ ಆರು ತಿಂಗಳ ಶ್ರಮ ಅರ್ಧಗಂಟೆಯಲ್ಲೇ ಹೋಮ

ಇಂದು ಸಂಜೆ ಸುರಿದ ಬಾರಿ ಮಳೆಗೆ ರೈತ ಬೆಳೆದಿದ್ದ ಬಾಳೆ ಫಸಲು ಸಂಪೂರ್ಣವಾಗಿ ನಾಶವಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಉತ್ತುವಳ್ಳಿಯಲ್ಲಿ…

29 mins ago

ಬಾರ್ ಗೆ ನುಗ್ಗಿದ ಕಳ್ಳರು: 60 ಲೀಟರ್ ಮದ್ಯ ಕಳ್ಳತನ

ಜಿಲ್ಲೆಯ ಹನೂರು ಪಟ್ಟಣದ ಬಂಡಳ್ಳಿ ಮುಖ್ಯ ರಸ್ತೆಯಲ್ಲಿರುವ ಅಮೃತ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ತಡ ರಾತ್ರಿ ಕಳ್ಳರ ತಂಡ…

43 mins ago

ಬಾಳೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಕೋರಿ ರಾಷ್ಟ್ರೀಯ ಹೆದ್ದಾರಿ ಬಂದ್ ಚಳುವಳಿ

ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಚಾಮರಾಜನಗರದ ಸತ್ಯಮಂಗಲಂ ಮುಖ್ಯ ರಸ್ತೆಯಲ್ಲಿ ಜಮಾಯಿಸಿದ ಸಂಘದ ಪದಾಧಿಕಾರಿಗಳು…

58 mins ago

ಗಾಳಿ ಸಮೇತ ಭಾರಿ ಮಳೆ : ನೆಲಕಚ್ಚಿದ ಮರಗಳು

ಧಾರವಾಡದಲ್ಲಿ ಶನಿವಾರ ಗಾಳಿ ಸಮೇತ ಮಳೆಯಾಗಿದ್ದು, ಅಲ್ಲಲ್ಲಿ ಮರಗಳು ನೆಲಕಚ್ಚಿದ ಬಗ್ಗೆ ವರದಿಯಾಗಿದೆ. ಬೆಳಿಗ್ಗೆಯಿಂದ ವಿಪರೀತ ಬಿಸಿಲಿನ ವಾತಾವರಣವಿತ್ತು

1 hour ago

ಮನುಷ್ಯನ ಆರೋಗ್ಯಕ್ಕೆ ಕ್ರೀಡೆಗಳು ಅತ್ಯಂತ ಸಹಕಾರಿ : ತಮ್ಮಯ್ಯ

ಕ್ರೀಡೆಗಳು ಮನುಷ್ಯನ ಆರೋಗ್ಯವನ್ನು ಸುಸ್ಥಿರವಾಗಿ ಕಾಪಾಡುವ ಜೊ ತೆಗೆ ಮನಸ್ಸನ್ನು ಹತೋಟಿಗಿಡುವ ಬಹುದೊಡ್ಡ ಸಾಧನ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ…

2 hours ago

ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು- ತಮ್ಮಯ್ಯ

ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು. ಆ ನಿಟ್ಟಿನಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಬೇಕೆಂದು ಶಾಸಕ ಎಚ್.ಡಿ. ತಮ್ಮಯ್ಯ ಅವರು ಹೇಳಿದ್ದಾರೆ. ನಗರದ ಬಸವನಹಳ್ಳಿಯ…

2 hours ago