News Karnataka Kannada
Thursday, May 09 2024
ಪಂಜಾಬ್

ಪಂಜಾಬ್​ನಲ್ಲಿ 400 ಹೊಸ ಮೊಹಲ್ಲಾ ಕ್ಲಿನಿಕ್ ಆರಂಭ!

400 new mohalla clinics to be set up in Punjab
Photo Credit : News Kannada

ಪಂಜಾಬ್: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶುಕ್ರವಾರ 400 ಹೊಸ ‘ಆಮ್ ಆದ್ಮಿ’ ಚಿಕಿತ್ಸಾಲಯಗಳನ್ನು ರಾಜ್ಯದ ಜನತೆಗೆ ಅರ್ಪಿಸಿದ್ದಾರೆ.

ಈ ಹೊಸ ಕ್ಲಿನಿಕ್​ಗಳ ಆರಂಭದೊಂದಿಗೆ ಮೊಹಲ್ಲಾ ಕ್ಲಿನಿಕ್​ಗಳ ಒಟ್ಟು ಸಂಖ್ಯೆ 500 ಕ್ಕೆ ತಲುಪಿದೆ. ಈ ಸಂದರ್ಭ ಮಾತನಾಡಿದ ಕೇಜ್ರಿವಾಲ್, ಪಂಜಾಬ್‌ನಲ್ಲಿ ಎಎಪಿ ಸರ್ಕಾರ ಕೇವಲ 10 ತಿಂಗಳಲ್ಲಿ 500 ಮೊಹಲ್ಲಾ ಕ್ಲಿನಿಕ್‌ಗಳನ್ನು ತೆರೆದಿರುವುದು ತುಂಬಾ ಸಂತೋಷದ ವಿಷಯವಾಗಿದೆ ಎಂದರು.

ಪಂಜಾಬ್‌ನಲ್ಲಿ 500 ಮೊಹಲ್ಲಾ ಚಿಕಿತ್ಸಾಲಯಗಳನ್ನು ಸ್ಥಾಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಇಂತಹ ಇನ್ನಷ್ಟು ಸೌಲಭ್ಯಗಳು ಬರಲಿವೆ ಎಂದು ಕೇಜ್ರಿವಾಲ್ ಪಂಜಾಬ್​ ಜನತೆಗೆ ಭರವಸೆ ನೀಡಿದರು.

ಪಂಜಾಬ್ ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಮತ್ತು ಆಪ್ ಸಂಸದ ರಾಘವ್ ಚಡ್ಡಾ ಕೂಡಾ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು