ಪಂಜಾಬ್: ಪಂಜಾಬ್ನ ನಭಾದ ಪಾಂಡುಸರ್ ಪ್ರದೇಶದಲ್ಲಿ ಪೋಷಕರಿಬ್ಬರು ತಮ್ಮ ಮೂರು ತಿಂಗಳ ಹೆಣ್ಣು ಮಗುವನ್ನು ಗೋಡೆಯ ಮೇಲೆ ಹೊಡೆದು ಕೊಂದಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಮೃತ ಮಗುವನ್ನು ಪರಿ (3 ತಿಂಗಳು) ಎಂದು ಗುರುತಿಸಲಾಗಿದೆ.ಮಗುವನ್ನು ಗೋಡೆಗೆ ಹೊಡೆದು ಸಾಹಿಸಲಾಗಿದ್ದು, ಗೋಡೆಯ ಮೇಲೆ ರಕ್ತದ ಕುರುಹುಗಳೂ ಪತ್ತೆಯಾಗಿವೆ.
ಸದ್ಯ ಇಬ್ಬರೂ ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಹುಡುಕಾಟ ನಡೆಯುತ್ತಿದೆ. ಶೀಘ್ರದಲ್ಲೇ ಆರೋಪಿಗಳನ್ನು ಹಿಡಿಯಲಾಗುವುದು ಎಂದು ನಭಾ ಕೊತ್ವಾಲಿ ಉಸ್ತುವಾರಿ ರಾಜೇಶ್ ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಬಾಲಕಿಯ ಅಜ್ಜ ಸಂಜೀವ್ ಕುಮಾರ್ ಮತ್ತು ಅಜ್ಜಿ ಮೋನಾ ರಾಣಿ ಹೇಳಿಕೆ ನೀಡಿದ್ದು, ತಮ್ಮ ಮಗ ಅಜಯ್ ಕುಮಾರ್ಗೆ ಸುಮಾರು ಒಂದೂವರೆ ವರ್ಷಗಳ ಹಿಂದೆ ವಿವಾಹವಾಗಿತ್ತು. ಅಜಯ್ ಮಾದಕ ವ್ಯಸನಿಯಾಗಿದ್ದಾನೆ ಎಂದು ತಿಳಿಸಿದರು.
ಮಂಗಳವಾರ ರಾತ್ರಿ ಅಜಯ್ ಕುಡಿದು ಮನೆಗೆ ಬಂದಿದ್ದ. ಬೆಳಗಿನ ಜಾವ ಮೂರರ ಸುಮಾರಿಗೆ ಮಗನ ಕೋಣೆಯಿಂದ ಜೋರಾದ ಶಬ್ಧ ಕೇಳಿ ಬಂತು. ತಕ್ಷಣವೇ ನಾವು ಅಲ್ಲಿಗೆ ಹೋದೆವು. ಈ
ವೇಳೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗುವನ್ನು ನಭಾದಲ್ಲಿರುವ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಗುವನ್ನುಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದರು.
ಘಟನೆ ನಡೆದ ತಕ್ಷಣವೇ ಮಗುವಿನ ಪೋಷಕರು ಮನೆಯ ಹಿಂಬದಿಯಿಂದ ಪರಾರಿಯಾಗಿದ್ದಾರೆ. ಇನ್ನೂ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.